ತೆಲುಗಿನಲ್ಲಿ ಸ್ಟಾರ್ ನಟ-ನಟಿಯಾದ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ವಿವಾಹವಾಗುತ್ತಿದ್ದು ಭಾವಿ ಪತಿಗಾಗಿ ಸಮಂತಾ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಗುಲ್ಲು ಟಾಲಿವುಡ್ ನಲ್ಲಿ ಎದ್ದಿದೆ.
ಅಕ್ಕಿನೇನಿ ನಾಗಚೈತನ್ಯ ಅವರ ಮನೆಯಲ್ಲಿ ನಡೆದ ವಿಶೇಷ ಪೂಜೆಯೊಂದರಲ್ಲಿ ಸಮಂತಾ ರುತ್ ಪ್ರಭು ಭಾಗಿಯಾಗಿದ್ದರು. ಇಲ್ಲಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಮೂಲ ಕ್ರಿಶ್ಚಿಯನ್ ಧರ್ಮದವರಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ ಹೈ ಮಾಯ ಚೇಸ್ಯಾವೇ ಚಿತ್ರದಲ್ಲಿ ಅಭಿನಯಿಸಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ನಾಗ ಚೈತನ್ಯ ಮತ್ತು ಸಮಂತಾ ಅವರ ಜತೆ ಅಕ್ಕಿನೇನಿ ಮತ್ತೊಂದು ಕುಡಿ ಅಖಿಲ್ ಅಕ್ಕಿನೇನಿ ಅವರ ಮದುವೆಕೂಡ ನೆರವೇರಿಸಲು ನಾಗಾರ್ಜುನ ಪ್ಲ್ಯಾನ್ ಮಾಡಿದ್ದು ಮುಂದಿನ ವರ್ಷಕ್ಕೆ ಅದ್ಧೂರಿ ಮದುವೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.