ವಿಶ್ವದ ಅತಿಸುಂದರ ಮಹಿಳೆಯರು; ಪ್ರಿಯಾಂಕಾ ಚೋಪ್ರಾಗೆ ಎರಡನೇ ಸ್ಥಾನ; ಬಿಯಾನ್ಸೆ ಮೊದಲಿನವರು

ವಿಶ್ವದ ಜನಪ್ರಿಯ ಮಹಿಳೆಯರಾದ ಏಂಜಲೀನಾ ಜೋಲಿ, ಎಮ್ಮಾ ವ್ಯಾಟ್ಸನ್, ಬ್ಲೇಕ್ ಲೈವ್ಲಿ ಮತ್ತು ಮಿಶೆಲ್ ಒಬಾಮಾ ಮುಂತಾದವರನ್ನು ಹಿಂದಿಕ್ಕಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
Updated on: 
ಹಾಲಿವುಡ್: ವಿಶ್ವದ ಜನಪ್ರಿಯ ಮಹಿಳೆಯರಾದ ಏಂಜಲೀನಾ ಜೋಲಿ, ಎಮ್ಮಾ ವ್ಯಾಟ್ಸನ್, ಬ್ಲೇಕ್ ಲೈವ್ಲಿ ಮತ್ತು ಮಿಶೆಲ್ ಒಬಾಮಾ ಮುಂತಾದವರನ್ನು ಹಿಂದಿಕ್ಕಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವದ ಎರಡನೇ ಅತಿ ಸುಂದರ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದಾರೆ. ಲಾಸೆಂಜಲಿಸ್ ಮೂಲದ ಫೋಟೋ, ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣ ಬಜ್ ನೆಟ್ ನಡೆಸಿದ ಸಮೀಕ್ಷೆಯಲ್ಲಿ ಪಾಪ್ ಸ್ಟಾರ್ ಬಿಯಾನ್ಸೆ ನಂತರ ಪ್ರಿಯಾಂಕಾ ಎರಡನೇ ಸ್ಥಾನದಲ್ಲಿದ್ದಾರೆ. 
ಇದಕ್ಕಾಗಿ ಅಭಿಮಾನಿಗಳಿಗೆ ವಂದಿಸಿರುವ ೩೪ ವರ್ಷದ ನಟಿ, ಮತ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. 
ಮೂರನೇ ಸ್ಥಾನದಲ್ಲಿ ಮಾಡೆಲ್ ಟೈಲರ್ ಹಿಲ್ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳಲ್ಲಿ ವ್ಯಾಟ್ಸನ್, ಡಕೋಟಾ ಜಾನ್ಸನ್, ಹಿಲರಿ ಕ್ಲಿಂಟನ್ ಇದ್ದಾರೆ. 
ಜೋಲಿ ೮ನೆ ಸ್ಥಾನದಲ್ಲಿದ್ದರೆ, ಈ ವರ್ಷ ಆಸ್ಕರ್ ಗೆದ್ದ ಎಮ್ಮಾ ಸ್ಟೋನ್ ೧೨ ನೇ ಸ್ಥಾನ ಪಡೆದಿದ್ದಾರೆ. ಸೂಪರ್ ಮಾಡೆಲ್ ಗಿಜಿ ಹ್ಯಾಡಿಡ್ ೧೩ ನೆಯ ಸ್ಥಾನದಲ್ಲಿಯೂ ಅಮೆರಿಕಾದ ಮಾಜಿ ಮೊದಲ ಮಹಿಳೆ ಮಿಶೆಲ್ ಒಬಾಮಾ ೨೧ ನೆಯ ಸ್ಥಾನದಲ್ಲಿಯೂ ಇದ್ದಾರೆ. 
ಈ ಪಟ್ಟಿಯಲ್ಲಿ ವಂಡರ್ ವುಮೆನ್ ನಟಿ ಗಾಲ್ ಗ್ಯಾಡತ್, ಓಪ್ರಾ ವಿನ್ಫ್ರೆ, ನಯೋಮಿ ಕ್ಯಾಂಪ್ಬೆಲ್, ಆಲಿಸಿಯ ವಿಕಂದರ್, ಮಾರ್ಗಾಟ್ ರಾಬಿ, ಪ್ರಿಯಾಂಕಾ ಅವರ ಬೇವಾಚ್ ಸಹನಟಿ ಅಲೆಕ್ಸಾಂಡರ್ ದಡ್ಡಾರಿಯೋ ಕೂಡ ಸ್ಥಾನ ಪಡೆದಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com