ಸಾರಾ ತೆಂಡೂಲ್ಕರ್ ಮತ್ತು ರಣವೀರ್ ಸಿಂಗ್
ಸಿನಿಮಾ ಸುದ್ದಿ
ನಟ ರಣವೀರ್ ಸಿಂಗ್ ಜೊತೆ ಸಚಿನ್ ಪುತ್ರಿ ಸಾರಾ ಸುತ್ತಾಟ: ಫೋಟೋ ವೈರಲ್
ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ಇತ್ತೀಚೆಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ...
ಮುಂಬಯಿ: ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ಇತ್ತೀಚೆಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಟಿ ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರನೊಂದಿಗೆ ಸಾರಾ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದಷ್ಟೇ ಸಾರಾ ಬಾಲಿವುಡ್'ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಆದರೆ, ಸ್ವತಃ ಇದನ್ನು ಸಚಿನ್ ತೆಂಡೂಲ್ಕರ್ ಅಲ್ಲಗಳೆದಿದ್ದರಲ್ಲದೆ, ಸುಳ್ಳು ಸುದ್ದಿಗಳನ್ನು ಬಿತ್ತರಿಸದಂತೆ ಮಾಧ್ಯಮಕ್ಕೆ ತಿಳಿ ಹೇಳಿದ್ದರು.
ಆದರೆ ಸಾರಾ ರಣವೀರ್ ಸಿಂಗ್ ಜೊತೆ ಇತ್ತೀಚೆಗೆ ಹೆಚ್ಚುಚ್ಚು ಸುತ್ತಾಡತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ