ಆಜಾನ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ವೈಯಕ್ತಿಕವಾಗಿ ಹೇಳುವುದಾದರೆ ನಾನು ಆಜಾನ್ ನ್ನು ಪ್ರೀತಿಸುತ್ತೇನೆ. ಲಖನೌನಲ್ಲಿ ತನು ವೆಡ್ಸ್ ಮನು ಚಿತ್ರದ ಚಿತ್ರೀಕರಣ ಮಾಡುತ್ತಿರಬೇಕಾದರೆ, ಆಜಾನ್ ಶಬ್ಧ ಕೇಳಿ ಬರುತ್ತಿತ್ತು. ಆಜಾನ್ ನ್ನು ಬಹಳ ಪ್ರೀತಿಸುತ್ತೇನೆ. ವೈಯಕ್ತಿಕವಾಗಿಯಷ್ಟೇ ನಾನು ಹೇಳಿಕೆಯನ್ನು ನೀಡುತ್ತೇನೆ. ಗುರುದ್ವಾರವಾಗಲೀ ಅಥವಾ ಭಗವದ್ಗೀತೆಯಾಗಲೀ, ಆಜಾನ್ ಆಗಲೂ ಧಾರ್ಮಿಕ ಆಚರಣೆಗಳನ್ನು ನಾನು ಬಹಳ ಇಷ್ಟ ಪಡುತ್ತೇನೆ. ಮಸೀದಿ, ದೇಗುಲ ಮತ್ತು ಚರ್ಚೆಗಳಲ್ಲಿನ ಆರಾಧನೆಗಳನ್ನು ನಾನು ವೈಯಕ್ತಿಕವಾಗಿ ಇಷ್ಟ ಪಡುತ್ತೇನೆಂದು ಹೇಳಿದ್ದಾರೆ.