ಧ್ರುವ ಸರ್ಜಾ ಜೊತೆಗಿನ ಹಯಗ್ರೀವ ಪ್ರಾಜೆಕ್ಟ್ ಸ್ಥಗಿತಗೊಳಿಸಿದ ನಂದಕಿಶೋರ್?

ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ರಿಲೀಸ್ ಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಆದರೆ ನಿರ್ದೇಶಕ ನಂದ ಕಿಶೋರ್ ಧ್ರುವ ಜೊತೆಗಿನ ತಮ್ಮ ...
ಧ್ರುವ ಸರ್ಜಾ
ಧ್ರುವ ಸರ್ಜಾ
Updated on
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ರಿಲೀಸ್ ಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಆದರೆ ನಿರ್ದೇಶಕ ನಂದ ಕಿಶೋರ್ ಧ್ರುವ ಜೊತೆಗಿನ ತಮ್ಮ ಮುಂದಿನ ಪ್ರಾಜೆಕ್ಟ್ ಹಯಗ್ರೀವ ರದ್ದುಗೊಳಿಸಿದ್ದಾರೆ.
ಈ ಸಿನಿಮಾ ರದ್ದು ಗೊಳಿಸಿರುವ ನಂದಕಿಶೋರ್ ಮತ್ತೊಬ್ಬ ನಟನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ, ಹಯಗ್ರೀವ ಬಹು ದೊಡ್ಡ ಪ್ರಾಜೆಕ್ಟ್. ಕಳೆದ ತಿಂಗಳ ಈ ಸಿನಿಮಾ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿದ್ದವು. ಈ ಸಿನಿಮಾದಲ್ಲಿ ನಟಿಸಲು ಧ್ರುವ ಸರ್ಜಾಗೆ ಹೆಚ್ಚಿನ ತಯಾರಿಯ ಅಗತ್ಯತೆಯಿದೆ, ಆದರೆ ಧ್ರುವ ಸರ್ಜಾ ಭರ್ಜರಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗವಹಿಸಬೇಕಾಗಿರುವ ಕಾರಣ ಹಯಗ್ರೀವ ಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ, 
ಹೀಗಾಗಿ ಬೇರೆ ನಟನನ್ನು ಹಾಕಿಕೊಂಡು ಸಿನಿಮಾ ಮಾಡಲು ನಂದ ಕಿಶೋರ್ ನಿರ್ಧರಿಸಿದ್ದಾರೆ. ಬೇರೆ ನಾಯಕ ಫೈನಲ್ ಆಗುವವರೆಗೂ ಸಿನಿಮಾ ಸ್ಥಗಿತಗೊಳ್ಳಲಿದೆ. ಪೊಗರು ಸಿನಿಮಾ ಶೂಟಿಂಗ್ ಸೆಪ್ಟಂಬರ್ 20 ರಿಂದ ಆರಂಭವಾಗಲಿದ್ದು, ಧ್ರುವಾ ಸರ್ಜಾ ಅದರಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಪೊಗರು ರಿಮೇಕ್ ಸಿನಿಮಾ ಆಗಿರುವುದರಿಂದ ಈ ಸಿನಿಮಾವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com