ರಾಜಕುಮಾರಿ ಡಯಾನಾರನ್ನು ಭೇಟಿ ಮಾಡಲು ನಾನು ಬಯಸುತ್ತೇನೆ: ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆಗೆ ದಿವಂಗತ ರಾಜಕುಮಾರಿ ಡಯಾನಾರನ್ನು ಭೇಟಿ ಮಾಡುವುದು ತುಂಬಾ ಇಷ್ಟವಂತೆ. ಹಾಗಂತ ದೀಪಿಕಾ ತಮ್ಮ ಟ್ವಿಟ್ಟರ್...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on
ಮುಂಬಯಿ: ನಟಿ ದೀಪಿಕಾ ಪಡುಕೋಣೆಗೆ ದಿವಂಗತ ರಾಜಕುಮಾರಿ ಡಯಾನಾರನ್ನು ಭೇಟಿ ಮಾಡುವುದು ತುಂಬಾ ಇಷ್ಟವಂತೆ. ಹಾಗಂತ ದೀಪಿಕಾ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ 20 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಏಷ್ಯಾದಲ್ಲೇ ಅತಿ ಹೆಚ್ಚು ಟ್ಟಿಟ್ಟರ್ ಫಾಲೋವರ್ಸ್ ಹೊಂದಿರುವ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮಂಗಳವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು ದೀಪಿಕಾರನ್ನು ಪ್ರಶ್ನಿಸಿದ್ದಾರೆ. ಈ ಪ್ರಪಂಚದಲ್ಲಿ ಬದುಕಿರುವ ಅಥವಾ ಸತ್ತಿರುವ ವ್ಯಕ್ತಿಗಳಲ್ಲಿ ಯಾರನ್ನು ಭೇಟಿ ಮಾಡಲು ಬಯಸುತ್ತೀರಿ ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿರುವ ದೀಪಿಕಾ ರಾಜಕುಮಾರಿ ಡಯಾನಾರನ್ನು ಭೇಟಿ ಮಾಡುವುದು ನನಗೆ ತುಂಬಾ ಇಷ್ಟ, ಆದರೆ ಅವರನ್ನು ನಾನು ಎಂದಿಗೂ ಭೇಟಿಯಾಗಿಲ್ಲ,  ನಾನು ಚಿಕ್ಕವಳಿದ್ದಾಗ ರಾಜಮನೆತನಕ್ಕೂ ನನಗೂ ಏನೋ ಅಪರಿಚಿತ ಸಂಬಂಧ ಇರುವಂತೆ ಅನ್ನಿಸುತ್ತಿತ್ತು ಎಂದು ಹೇಳಿದ್ದಾರೆ.
ನಿಮಗೆ ಖುಷಿ ಕೊಡುವ ವಿಷಯ ಯಾವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೀಪಿಕಾ, ಪೋಷಕರು,ಸಹೋದರಿಯರು ಮತ್ತು ಸ್ನೇಹಿತರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com