ಕೆಂಪೇಗೌಡ-2 ಚಿತ್ರದ ಚೇಸಿಂಗ್ ವೇಳೆ ಅವಘಡ: ಲೂಸ್ ಮಾದ ಯೋಗಿ, ಕೋಮಲ್‌ಗೆ ಗಾಯ

ಕೆಂಪೇಗೌಡ-2 ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ನಟ ಕೋಮಲ್ ಹಾಗೂ ಸಹನಟ ಯೋಗಿ ಗಾಯಗೊಂಡಿದ್ದಾರೆ...
ಲೂಸ್ ಮಾದ ಯೋಗಿ, ಕೋಮಲ್
ಲೂಸ್ ಮಾದ ಯೋಗಿ, ಕೋಮಲ್
ಚೆನ್ನೈ: ಕೆಂಪೇಗೌಡ-2 ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ನಟ ಕೋಮಲ್ ಹಾಗೂ ಸಹನಟ ಯೋಗಿ ಗಾಯಗೊಂಡಿದ್ದಾರೆ. 
ತಮಿಳುನಾಡಿನ ಮಹಾಬಲಿಪುರಂನಲ್ಲಿ ಚೇಸಿಂಗ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು ಈ ವೇಳೆ ಯೋಗಿ ಮತ್ತು ಕೋಮಲ್ ಕುಳಿತಿದ್ದ ಬೈಕ್ ಪಲ್ಟಿ ಹೊಡೆದಿದೆ ಯೋಗಿ ಕೆಳಗೆ ಬಿದ್ದು ಗಾಯಗೊಂಡಿದ್ದರೆ ಕೋಮಲ್ ಗೆ ಸಣ್ಣ ಗಾಯವಾಗಿರುವುದಾಗಿ ಟಿವಿ ಮಾಧ್ಯಮಗಳಲ್ಲಿ ವರದಿ ಮಾಡಿದೆ. 
ಇನ್ನು ಗಾಯಗೊಂಡಿರುವ ಇಬ್ಬರನ್ನೂ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕೋಮಲ್ ಹಾಗೂ ಯೋಗಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಇಬ್ಬರು ನಟರು ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಗಾಬರಿಪಡಬೇಕಿಲ್ಲ ಎಂದು ಕೆಂಪೇಗೌಡ 2 ಚಿತ್ರ ತಂಡ ಪ್ರತಿಕ್ರಿಯೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com