ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರ ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ನಟಿಸುತ್ತಿದ್ದು ಮುಂದಿನ ಚಿತ್ರ ಬಿ ಸುರೇಶ್ ಮತ್ತು ಶೈಲಜ ನಿರ್ಮಾಣದಲ್ಲಿ ಅಭಿನಯಿಸಲಿದ್ದಾರೆ.
ಚಿತ್ರಕ್ಕೆ ಇನ್ನು ಶೀರ್ಷಿಕೆ ನಿಗದಿಯಾಗಿಲ್ಲ. ಆದರೆ ಚಿತ್ರವನ್ನು ಪೊನ್ ಕುಮಾರ್ ಎಂಬುವರು ನಿರ್ದೇಶಿಸುತ್ತಿದ್ದು ಬುಲ್ ಬುಲ್ ಖ್ಯಾತಿಯ ರಚಿತ ರಾಮ್ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ.
ಮೊದಲಿಗೆ ಚಿತ್ರದ ನಿರ್ದೇಶಕರು ಈ ಪಾತ್ರಕ್ಕೆ ರಚಿತ ರಾಮ್ ಸೂಕ್ತ ಆಯ್ಕೆ ಎಂದು ತೀರ್ಮಾನಿಸಿದ್ದು ನಿರ್ಮಾಪಕರು ರಚಿತ ರಾಮ್ ರನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಮುಂದಾದರೆ ಮತ್ತೊಮ್ಮೆ ಬುಲ್ ಬುಲ್ ಜೋಡಿ ತೆರೆ ಮೇಲೆ ವಿಜೃಂಬಿಸಲಿದೆ.
ನಿರ್ಮಾಪಕರು ದರ್ಶನ್ ರ 51ನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಿಲ್ಲ. ಕುರುಕ್ಷೇತ್ರ ಚಿತ್ರದ ಸಂಪೂರ್ಣವಾಗಿ ಮುಕ್ತಾಯಗೊಂಡ ಮೇಲೆ ಚಿತ್ರದ ಬಗ್ಗೆ ಅಧಿಕೃತ ಘೋಷಣೆಗಳು ಹೊರಬೀಳಲಿವೆ.
ರಚಿತಾ ರಾಮ್ ದರ್ಶನ್ ಜತೆಗಿನ ಬುಲ್ ಬುಲ್ ಚಿತ್ರದೊಂದಿಗೆ ತಮ್ಮ ಚಿತ್ರ ವೃತ್ತಿಯನ್ನು ಆರಂಭಿಸಿದ್ದರು. ಸದ್ಯ ರಚಿತಾ ರಾಮ್ ದುನಿಯಾ ವಿಜಯ್ ಜತೆ ಜಾನಿ ಜಾನಿ ಏಸ್ ಪಪ್ಪಾ, ಮತ್ತು ಸತೀಶ್ ನಿನಾಸಂ ಜತೆಗಿನ ಅಯೋಗ್ಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.