ಕಟಕ ಚಿತ್ರದ ಸೀಕ್ವೆಲ್ ಗೆ ನಿರ್ದೇಶಕ ರವಿ ಬಸ್ರೂರ್ ಪ್ಲಾನ್

ನಿರ್ದೇಶನದ ಮೊದಲ ಚಿತ್ರದಲ್ಲೇ ವಾಮಾಚಾರ ಕುರಿತಾದ ಕಟಕ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ರವಿ ಬಸ್ರೂರ್ ಇದೀಗ ಕಟಕ ಚಿತ್ರದ ಸೀಕ್ವೆಲ್ ತೆಗೆಯಲು...
ಕಟಕ
ಕಟಕ
Updated on: 
ನಿರ್ದೇಶನದ ಮೊದಲ ಚಿತ್ರದಲ್ಲೇ ವಾಮಾಚಾರ ಕುರಿತಾದ ಕಟಕ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ರವಿ ಬಸ್ರೂರ್ ಇದೀಗ ಕಟಕ ಚಿತ್ರದ ಸೀಕ್ವೆಲ್ ತೆಗೆಯಲು ಮುಂದಾಗಿದ್ದಾರೆ.
ಕಟಕ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರದ ಯಶಸ್ಸನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ನಿರ್ದೇಶಕರು ತೀರ್ಮಾನಿಸಿದ್ದು ಅಂತೆ ಕಟಕ ಚಿತ್ರದ ಸೀಕ್ವೆಲ್ ತೆಗೆಯಲಿದ್ದಾರೆ. 
ರವಿ ಬಸ್ರೂರ್ ಸೀಕ್ವೆಲ್ ಗಾಗಿ ಚಿತ್ರಕಥೆ ಬರೆಯುತ್ತಿದ್ದಾರೆ. ಸೀಕ್ವೆಲ್ ನಲ್ಲಿ ದೃಶ್ಯ ಪರಿಣಾಮಕಾರಿಯಾಗಿರಲಿದೆ. ಸೀಕ್ವೆಲ್ ಚಿತ್ರದಲ್ಲಿ ಫ್ಲಾಶ್ ಬ್ಯಾಕ್ ನಲ್ಲಿ ಎನ್ನೆಲ್ಲಾ ಆಯಿತು ಎಂಬುದನ್ನು ಒಳಗೊಂಡಿದೆ. 
ಸಂಹಾರ ಹಾಗೂ ಅಂಜನಿಪುತ್ರ ಚಿತ್ರದ ಹಿನ್ನಲೆ ಸಂಗೀತ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸಂಗೀತ ಸಂಯೋಜನೆ ಕೆಲಸಗಳು ಮುಗಿದ ನಂತರ ಕಟಕ ಚಿತ್ರದ ಸೀಕ್ವೆಲ್ ಗೆ ರವಿ ಬಸ್ರೂರ್ ಅವರು ಕೈಹಾಕಲಿದ್ದು ಜನವರಿಯಿಂದ ಚಿತ್ರದ ಕೆಲಸಗಳು ಆರಂಭಗೊಳ್ಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com