ನಂದಿ ಬೆಟ್ಟದಲ್ಲಿ ಚಿಟ್ಟೆ ಶೂಟಿಂಗ್ ಮುಗಿಸಿದ ಹರ್ಷಿಕಾ

ನಂದಿ ಬೆಟ್ಟದ ತುತ್ತತುದಿಯಲ್ಲಿ ನಿಂತು ನಟಿ ಹರ್ಷಿಕಾ ಪೂಣಚ್ಚ ಉದ್ದದ ಕೆಂಪು ಬಣ್ಣದ ಗೌನ್ ತೊಟ್ಟು ಸೋನ ಸೋನ...
ಚಿಟ್ಟೆ ಚಿತ್ರದಲ್ಲಿ ನಾಯಕನೊಂದಿಗೆ ನಟಿ ಹರ್ಷಿಕಾ
ಚಿಟ್ಟೆ ಚಿತ್ರದಲ್ಲಿ ನಾಯಕನೊಂದಿಗೆ ನಟಿ ಹರ್ಷಿಕಾ
Updated on: 
ನಂದಿ ಬೆಟ್ಟದ ತುತ್ತತುದಿಯಲ್ಲಿ ನಿಂತು ನಟಿ ಹರ್ಷಿಕಾ ಪೂಣಚ್ಚ ಉದ್ದದ ಕೆಂಪು ಬಣ್ಣದ ಗೌನ್ ತೊಟ್ಟು ಸೋನ ಸೋನ ರೆ ಸೋನ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಈ ಹಾಡಿನ ಮೂಲಕ ಕನ್ನಡದ ಚಿಟ್ಟೆ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.
ಈ ಹಾಡಿನ ಮೂಲಕವೇ ಹರ್ಷಿಕಾ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತದೆ. ಚಿತ್ರದಲ್ಲಿ ನನ್ನ ಪ್ರೀತಿಯ ಹೆಸರು ಚಿಟ್ಟೆ ಆದರೂ ಕೂಡ ನನ್ನ ಪಾತ್ರದ ಹೆಸರು ಸೋನ ಎಂದು. ಹೀಗಾಗಿ ಹಿಂದಿ ಚಿತ್ರದ ಹಾಡಾದ ಸೋನಾ ಸೋನಾ ರೆ ಸೋನಾ ಸಾಲುಗಳನ್ನು ತೆಗೆದುಕೊಳ್ಳಲು ನಿರ್ದೇಶಕರು ನಿರ್ಧರಿಸಿದರು ಎಂದರು ಹರ್ಷಿಕಾ ಪೂಣಚ್ಚ.
ಚಿತ್ರದ ಪರಿಚಯದ ಹಾಡನ್ನು ನಂದಿ ಬೆಟ್ಟದಲ್ಲಿ ಮುಂಜಾನೆಯ ಮಂಜಿನಲ್ಲಿ, ಸೋರ್ಯೋದಯ ಮತ್ತು ಸೂರ್ಯಾಸ್ತವನ್ನು ಸೆರೆ ಹಿಡಿಯಲು ನಿರ್ದೇಶಕ ಮತ್ತು ಬರಹಗಾರ ಎಂ.ಎಲ್.ಪ್ರಸನ್ನ ನಿರ್ಧರಿಸಿದರು. ಚಿತ್ರದ ಟ್ರಾಕ್ ಹಾಡು ಅದ್ಭುತವಾಗಿ ಜೀವಂತಿಕೆಯಾಗಿ ಮೂಡಿಬಂದಿದ್ದು, ರಾಜೇಶ್ ಕೃಷ್ಣ ಅವರು ದನಿಗೂಡಿಸಿದ್ದಾರೆ ಎಂದರು.
ಚಿಟ್ಟೆ ಚಿತ್ರದಲ್ಲಿ ಹರ್ಷಿಕಾ ಅವರ ಮೊದಲ ನೋಟ ಸಿನಿಮಾಸಕ್ತರಲ್ಲಿ ಬಹಳ ಕುತೂಹಲ ಮೂಡಿಸಿದ್ದು ಚಿತ್ರ ಬಿಡುಗಡೆಯಾದ ನಂತರವೂ ಅದೇ ಕುತೂಹಲ ಇರುತ್ತದೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಹರ್ಷಿಕಾ. 
ಈ ಮಧ್ಯೆ  ಮಾಲಿವುಡ್ ನ  ಚಾರ್ ಮಿನಾರ್  ಚೊಚ್ಚಲ ಚಿತ್ರದ ಶೂಟಿಂಗ್ ಮುಗಿಸಿರುವ ಹರ್ಷಿಕಾ ಮುಂದಿನ ಚಿತ್ರ ಒಪ್ಪಿಕೊಳ್ಳುವ ಮುನ್ನ ಚಿತ್ರದ ಸ್ಕ್ರಿಪ್ಟ್ ನೋಡಿಕೊಂಡು ನಿರ್ಧರಿಸಲಿದ್ದಾರಂತೆ. ಕಳೆದ 15 ದಿನಗಳಲ್ಲಿ ನಾನು 12 ಸ್ಕ್ರಿಪ್ಟ್ ನೋಡಿದ್ದೇನೆ. ಆದರೆ ಯಾವುದು ಕೂಡ ನನಗೆ ಇಷ್ಟವಾಗಲಿಲ್ಲ. ಈ ಹಿಂದಿನಂತೆ ಮುಂದಿನ ದಿನಗಳಲ್ಲಿ ನನ್ನ ಪ್ರಾಜೆಕ್ಟ್ ಒಪ್ಪಿಕೊಳ್ಳಲು ನಾನು ಆತುರ ಮಾಡುವುದಿಲ್ಲ ಎನ್ನುತ್ತಾರೆ ಹರ್ಷಿಕಾ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com