ರಾಜಕಾರಣಿಗಳನ್ನು ದೂಷಿಸಿ ಕೆಟ್ಟವರಾಗಬೇಡಿ: ಕಮಲ್ ಹಾಸನ್

ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟ ಕಮಲ್ ಹಾಸನ್ ರಾಜಕಾರಣಿಗಳನ್ನು ದೂಷಿಸುವ ಮೂಲಕ ಜನ ...
ಕಮಲಹಾಸನ್
ಕಮಲಹಾಸನ್
Updated on

ಚೆನ್ನೈ: ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟ ಕಮಲ್ ಹಾಸನ್ ರಾಜಕಾರಣಿಗಳನ್ನು ದೂಷಿಸುವ ಮೂಲಕ ಜನ ಕೆಟ್ಟವರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಮಲ ಹಾಸನ್, ತಮಿಳುನಾಡಿನಲ್ಲಿ ನಡೆಯುತ್ತಿರುವ ಎಐಎಡಿಎಂಕೆ ನಾಯಕರುಗಳಾಗ ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ನಡುವೆ ನಡೆಯುತ್ತಿರುವ ಎಲ್ಲಾ ಟನೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಭ್ರಷ್ಟ ರಾಜಕಾರಣಿಗಳ ಬಗ್ಗೆ ಮಾತನಾಡುತ್ತಾ ನಮ್ಮ ಎಲ್ಲಾ ಸ್ವಾತಂತ್ರ್ಯವನ್ನು ವ್ಯರ್ಥ ಮಾಡುತ್ತಿದ್ದೇವೆ, ರಾಜಕಾರಣಿಗಳನ್ನು ಬೈಯ್ಯುವುದನ್ನು ನಿಲ್ಲಿಸಿ, ಕೆಟ್ಟವರಾಗಬೇಡಿ ಎಂದು ಹೇಳಿದ್ದಾರೆ.

ತಮಿಳುನಾಡನ್ನು ಮುರಿಯಬೇಡಿ,  ಅಹಿಂಸೆಗಾಗಿ ನಡೆಯುವ ನಾಗರಿಕ ಯುದ್ಧದಲ್ಲಿ ತಮಿಳುನಾಡಿನ ಪರವಾಗಿ ಇಡೀ ಭಾರತ ಹೋರಾಟ ಮಾಡುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.  ಆದರೆ ಈ ಯುದ್ಧದಲ್ಲಿ ಯಾರೂ ಸಾಯುವುದಿಲ್ಲ, ಅಮಾಯಕ ಮಾತ್ರ ಬದುಕಿ ಬರುತ್ತಾನೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com