ಮಾಸ್ತಿಯಲ್ಲಿ ಮಗ ಸುರಾಗ್ ರೈಟ್-ಹ್ಯಾಂಡ್ ಆಗಿದ್ದ: ಸಾಧುಕೋಕಿಲಾ

ಸಂಜು ವೆಡ್ಸ್ ಗೀತಾ, ಮೈನಾ ಚಿತ್ರಗಳಂತಹ ಹಿಟ್ ಚಿತ್ರಗಳಿಗೆ ಮ್ಯೂಸಿಕ್ ನೀಡಿ ಮರೆಯಾಗಿದ್ದ ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ...
ಸಂಗೀತ ನಿರ್ದೇಶನ ಸಾಧು ಕೋಕಿಲಾ
ಸಂಗೀತ ನಿರ್ದೇಶನ ಸಾಧು ಕೋಕಿಲಾ

ಬೆಂಗಳೂರು: ಸಂಜು ವೆಡ್ಸ್ ಗೀತಾ, ಮೈನಾ ಚಿತ್ರಗಳಂತಹ ಹಿಟ್ ಚಿತ್ರಗಳಿಗೆ ಮ್ಯೂಸಿಕ್ ನೀಡಿ ಮರೆಯಾಗಿದ್ದ ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಮಾಸ್ತಿಗುಡಿ ಚಿತ್ರದ ಸಂಗೀತ ಕುರಿತಂತೆ ಸಾಧುಕೋಕಿಲಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಚಿತ್ರದ ಸಂಗೀತವನ್ನು ದುರಂತದಲ್ಲಿ ಮೃತಪಟ್ಟಿದ್ದ ಖಳನಟರಾದ ಅನಿಲ್ ಹಾಗೂ ಉದಯ್ ಅವರಿಗೆ ಸಮರ್ಪಿಸಿದ್ದಾರೆ.

ಚಿತ್ರದ ಸಂಗೀತ ಎರಡು ಕಾರಣಕ್ಕೆ ನನಗೆ ಬಹಳ ವಿಶೇಷವಾಗಿದೆ. ಮೊದಲ ಕಾರಣವೆಂದರೆ, ಸಂಗೀತವನ್ನು ನಿರ್ದೇಶನ ಮಾಡುವಾಗ ಸಹಜವಾಗಿ ನಾವು ನಾಲ್ಕು ಗೋಡೆಗಳ ಮಧ್ಯೆ ಮಾಡುತ್ತಿರುತ್ತೇವೆ. ಆದರೆ, ಚಿತ್ರದ ನಿರ್ದೇಶಕರು ನನ್ನ ಹೊರಗೆ ಕರೆದುಕೊಂಡು ಹೋಗಿ ಪ್ರಾಕೃತಿ ಮಡಿಲಿನಲ್ಲಿ ಸಂಗೀತವನ್ನು ನಿರ್ದೇಶಿಸಲು ಸಹಾಯ ಮಾಡಿದರು. ಮತ್ತೊಂದು ಕಾರಣ, ನನ್ನ ಮಗ ಸುರಾಗ್. ಚಿತ್ರದ ಸಂಗೀತದಲ್ಲಿ ಸುರಾಗ್ ಸಂಪೂರ್ಣವಾಗಿ ತೊಡಗಿಕೊಂಡಿದ್ದ. ಸಂಗೀತ ನಿರ್ದೇಶನದ ವೇಳೆ ನನ್ನ ಮಗ ನನಗೆ ರೈಟ್-ಹ್ಯಾಂಡ್ ಆಗಿದ್ದ ಎಂದು ಸಾಧುಕೋಕಿಲಾ ಅವರು ಹೇಳಿದ್ದಾರೆ.

ಕಾಂಕ್ರೀಟ್ ಸಿಟಿಯಿಂದ ನನ್ನನ್ನು ಹೊರಗೆ ಕರೆತಂದು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನಿರ್ದೇಶಿಸಲು ಸಹಾಯ ಮಾಡಿದ ನಿರ್ದೇಶಕ ನಾಗಶೇಖರ್ ಅವರಿಗೆ ಈ ಮೂಲಕ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ. ಚಿತ್ರದ ಐದೂ ಹಾಡುಗಳನ್ನು ಕವಿರಾಜ್ ಅವರೇ ಬರೆದಿದ್ದಾರೆ. ಸಂಗೀತ ನಿರ್ದೇಶನದ ವೇಳೆ ನನ್ನ ಮಗ ಸುರಾತ್ ತೊಡಿಗಿಕೊಂಡಿದ್ದು ನನಗೆ ಬಹಳ ಸಂತೋಷವನ್ನು ತಂದಿದೆ. ಮಾಸ್ತಿಗುಡಿಯಲ್ಲಿ ನನಗೆ ನನ್ನ ಮಗ ರೈಟ್-ಹ್ಯಾಂಡ್ ಆಗಿದ್ದ. ಮಗ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಮುಂದೆ ಸಾಗುತ್ತಿರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com