ಜಲ್ಲಿಕಟ್ಟು ಬ್ಯಾನ್ ಗೆ ಕಾರಣವಾದ ಪೆಟಾ ಸಂಘಟನೆ ಪರ ನಿಂತಿರುವ ನಟಿ ತ್ರಿಷಾ ಫೋಟೋವನ್ನು ತೆಗೆದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಜಲ್ಲಿಕಟ್ಟು ಆಚರಣೆ ಸಾಧ್ಯವಾಗದೇ ತಮಿಳುನಾಡಿನಲ್ಲಿ ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಕೆಲ ಸೂಪರ್ ಸ್ಟಾರ್ಸ್ ಗಳು ಜಲ್ಲಿಕಟ್ಟು ಪರ ಬ್ಯಾಟಿಂಗ್ ಮಾಡಿದರೇ ಇನ್ನು ಕೆಲವರು ಬೇಡ ಎಂದು ಹೇಳುತ್ತಿದ್ದಾರೆ.
ಸದ್ಯ ಪೆಟಾ ಸಂಘಟನೆ ಪರ ನಿಂತ ನಟಿ ತ್ರಿಷಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಸಾಯಿಲಾಗಿದೆ ಅಂತಾ ತ್ರಿಷಾ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಫೋಟೋ ಹಾಕಿ ಅಳಲು ತೊಡಿಕೊಂಡಿದ್ದಾರೆ.
ಜಲ್ಲಿಕಟ್ಟುವನ್ನು ನಾನು ವಿರೋಧಿಸಿಲ್ಲ. ಆದರೆ ಕೆಲವರು ನನ್ನನ್ನು ಟಾರ್ಗೆಟ್ ಮಾಡಿ ಈಗೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ಮಹಿಳೆಯರನ್ನು ಅವಮಾನಿಸುವುದು ತಮಿಳು ಸಂಸ್ಕೃತಿಯಾ ಅಂತಾ ಪ್ರಶ್ನಿಸಿದ್ದಾರೆ.