2 ವರ್ಷ ಬಳಿಕ ನಿರ್ದೇಶನಕ್ಕೆ ಮರಳಿದ ಕವಿತಾ ಲಂಕೇಶ್

2014ರಲ್ಲಿ ಕರಿಯಾ ಕಣ್ಣ್ ಬಿಟ್ಟ ಚಿತ್ರವನ್ನು ನಿರ್ದೇಶಿಸಿದ್ದ ಕವಿತಾ ಲಂಕೇಶ್ ಮತ್ತೆ ನಿರ್ದೇಶನಕ್ಕೆ ಮರಳಿಸಿದ್ದಾರೆ...
ಕವಿತಾ ಲಂಕೇಶ್
ಕವಿತಾ ಲಂಕೇಶ್
Updated on: 
2014ರಲ್ಲಿ ಕರಿಯಾ ಕಣ್ಣ್ ಬಿಟ್ಟ ಚಿತ್ರವನ್ನು ನಿರ್ದೇಶಿಸಿದ್ದ ಕವಿತಾ ಲಂಕೇಶ್ ಮತ್ತೆ ನಿರ್ದೇಶನಕ್ಕೆ ಮರಳಿಸಿದ್ದಾರೆ. 
ಕವಿತಾ ಲಂಕೇಶ್ ಇಲ್ಲಿಯವರೆಗೂ ಏಳು ಚಿತ್ರಗಳನ್ನು ನಿರ್ದೇಶಿಸಿದ್ದು, ಎಂಟನೇ ಚಿತ್ರದ ನಿರ್ದೇಶನಕ್ಕೆ ಮುಂದಾಗಿರುವ ಕವಿತಾ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು ಸುಧೀಕ್ಷಾ ಮೂವೀಸ್ ಲಾಂಛನದ ಅಡಿಯಲ್ಲಿ ಸುಬ್ರಹ್ಮಣ್ಯ ಶರ್ಮಾ ಅವರು ನಿರ್ಮಿಸುತ್ತಿದ್ದಾರೆ. ಕೇಸ್ ನಂ 18/7 ಚಿತ್ರ ನಾಯಕ ನಿರಂಜನ್ ಕುಮಾರ್ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. 
ಕವಿತಾ ತಮ್ಮ ಚಿತ್ರಕ್ಕಾಗಿ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ದೊರೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com