ಪುತ್ರಿಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರ ಮೊರೆ ಹೋದ ತ್ರಿಶಾ ತಾಯಿ

ತಮ್ಮ ಪುತ್ರಿಗೆ ರಕ್ಷಣೆ ನೀಡುವಂತೆ ಮತ್ತು ಟ್ವಿಟ್ಟರ್ ಅಕೌಂಟ್ ಕದ್ದವರ ವಿರುದ್ಧ ಕ್ರಮ...
ನಟಿ ತ್ರಿಶಾ
ನಟಿ ತ್ರಿಶಾ
ಚೆನ್ನೈ: ತಮ್ಮ  ಪುತ್ರಿಗೆ ರಕ್ಷಣೆ ನೀಡುವಂತೆ ಮತ್ತು ಟ್ವಿಟ್ಟರ್ ಅಕೌಂಟ್ ಕದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ನಟಿ ತ್ರಿಶಾರ ತಾಯಿ ಉಮಾ ಕೃಷ್ಣನ್ ಚೆನ್ನೈ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದ್ದಾರೆ.
ತ್ರಿಶಾ ಅವರು ಪೇಟಾದ ಕೆಲಸಗಳಿಗೆ ಹಲವು ವರ್ಷಗಳಿಂದ ಬೆಂಬಲ ನೀಡುತ್ತಾ ಬಂದಿರುವುದರಿಂದ ಅದು ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತ್ರಿಶಾ ತಮಿಳುನಾಡಿನ ಸಂಪ್ರದಾಯವಾದಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಕಳೆದ ವಾರ ಉದ್ರಿಕ್ತ ಪ್ರತಿಭಟನಾಕಾರರು  ತ್ರಿಶಾರ ತಮಿಳು ಚಿತ್ರ ಘರ್ಜನೈ ಶೂಟಿಂಗ್ ನಡೆಯುತ್ತಿದ್ದ ಸಿವಗಂಗಾ ಜಿಲ್ಲೆಗೆ ಹೋಗಿ ಗಲಾಟೆ ಮಾಡಿ ತ್ರಿಶಾ ಕುಳಿತಿದ್ದ ವಾನಿಟಿ ವ್ಯಾನ್ ನಿಂ ದ ಹೊರಗೆ ಬರುವಂತೆ ಒತ್ತಾಯಿಸಿದ್ದರು.
ತ್ರಿಶಾ ಕ್ಷಮೆ ಕೋರಿ ಪೇಟಾಕ್ಕೆ ನೀಡುವ ಬೆಂಬಲವನ್ನು ಹಿಂಪಡಯದಿದ್ದರೆ ತ್ರಿಶಾರಿಗೆ ತಮಿಳುನಾಡಿನಲ್ಲಿ ಶೂಟಿಂಗ್ ಮ  ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು.
ತ್ರಿಶಾರ ಸುರಕ್ಷತೆ ಬಗ್ಗೆ ಆತಂಕಕ್ಕೀಡಾಗಿರುವ ಅವರ ತಾಯಿ ಪೊಲೀಸ್ ರಕ್ಷಣೆ ಕೋರಿದ್ದಾರೆ. 
ಅವರು ತಮ್ಮ ದೂರಿನಲ್ಲಿ, ತ್ರಿಶಾ ಚಿಕ್ಕವಳಾಗಿದ್ದಾಗಿಂದಲೇ ನಾಯಿಯನ್ನು ಪ್ರೀತಿಸುತ್ತಿದ್ದಳು. ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುವ ಫೋಟೋ ಶೂಟ್ ನಲ್ಲಿ ಪೇಟಾದ ಭಾಗವಾಗಿ ತ್ರಿಶಾ ಕೆಲಸ ಮಾಡಿದ್ದಾಳೆ. ಅಲ್ಲಿಗೆ ಪೇಟಾ ಜೊತೆ ಆಕೆಯ ಸಹಚರ್ಯ ಮುಗಿದಿದೆ. ನಾವು ತಮಿಳರು ಮತ್ತು ಜಲ್ಲಿಕಟ್ಟಿಗೆ ವಿರುದ್ಧವಾಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ತ್ರಿಶಾರ ಟ್ವಿಟ್ಟರ್ ಅಕೌಂಟ್ ಗೆ ಸಂಬಂಧಪಟ್ಟಂತೆ ಅವರು ಪ್ರತಿಕ್ರಿಯಿಸಿ, ಯಾರೋ ತ್ರಿಶಾಳ ಅಕೌಂಟ್ ಹ್ಯಾಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅದಕ್ಕಾಗಿ ತ್ರಿಶಾ ಕೂಡಲೇ ಟ್ವಿಟ್ಟರ್ ಅಕೌಂಟ್ ಡಿ ಆಕ್ಟಿವೇಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com