ಜೈರಾ ನಾವೆಲ್ಲರೂ ನಿನ್ನೊಂದಿಗಿದ್ದೇವೆ: ನಟ ಅಮಿರ್ ಖಾನ್

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ದಂಗಲ್ ನಟಿ ಜೈರಾ ವಾಸೀಂ ಅವರ ಬೆಂಬಲಕ್ಕೆ ಇದೀಗ ಬಾಲಿವುಡ್ ನಟ ಅಮಿರ್ ಖಾನ್ ಅವರು ಬಂದಿದ್ದಾರೆ...
ಬಾಲಿವುಡ್ ನಟ ಅಮಿರ್ ಖಾನ್
ಬಾಲಿವುಡ್ ನಟ ಅಮಿರ್ ಖಾನ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ದಂಗಲ್ ನಟಿ ಜೈರಾ ವಾಸೀಂ ಅವರ ಬೆಂಬಲಕ್ಕೆ ಇದೀಗ ಬಾಲಿವುಡ್ ನಟ ಅಮಿರ್ ಖಾನ್ ಅವರು ಬಂದಿದ್ದಾರೆ.

ದಂಗಲ್ ಚಿತ್ರ ಯಶಸ್ಸು ಕಂಡ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಜೈರಾ ಅವರು ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಕೆಲವರು ಜೈರಾ ಅವರು ಕ್ಷಮೆಯಾಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಜೈರಾ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಜೈರಾ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಇದೂ ಕೂಡ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಈ ಹಿನ್ನಲೆಯಲ್ಲಿ ಇದೀಗ ನಟ ಅಮಿರ್ ಖಾನ್ ಅವರು, ಜೈರಾ ಹೇಳಿಕೆಯನ್ನು ನಾನು ಓದಿದೆ. ಆಕೆ ಈ ರೀತಿಯಾಗಿ ಹೇಳಿಕೆ ನೀಡಿದ್ದಾಳೆಂದರೆ ಆಕೆಯ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಊಹೆ ಮಾಡಿಕೊಳ್ಳಬಲ್ಲೆ. ಜೈರಾ ನಾನು ನಿನಗೆ ಹೇಳಬಯಸುವುದೇನೆಂದರೆ ನಾವೆಲ್ಲರೂ ನಿನ್ನೊಂದಿಗಿದ್ದೇವೆ. ಸೌಂದರ್ಯ ಎನ್ನುವುದು, ಪ್ರಕಾಶಮಾನವಾದ, ಯುವ, ಪ್ರತಿಭಾವಂತ, ಶ್ರಮದಾಯಕ, ಗೌರವಾನ್ವಿತ, ಕಾಳಜಿ ಮತ್ತು ಧೈರ್ಯವಂತ ನಿನ್ನಂತಹ ಆದರ್ಶಯುತ ಮಕ್ಕಳಲ್ಲಿ ಇರುತ್ತದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ಪ್ರಪಂಚಕ್ಕೂ ಆದರ್ಶ ವ್ಯಕ್ತಿಯಾಗಿದ್ದೀಯಾ. ನನಗೂ ನಾನು ಆದರ್ಶ ವ್ಯಕ್ತಿಯಾಗಿದ್ದೀಯ. ನಿನಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಇದೇ ವೇಳೆ ಜೈರಾ ವಿರುದ್ದ ಟೀಕೆ ಮಾಡುತ್ತಿರುವ ಜನರಿಗೆ ಸಂದೇಶವೊಂದನ್ನು ಹೇಳಿರುವ ಅಮಿರ್ ಖಾನ್ ಅವರು, ಆಕೆಯನ್ನು ಆಕೆಯ ಪಾಡಿಗೆ ಇರಲು ಬಿಟ್ಟುಬಿಡಿ. ಆಕೆ ಇನ್ನು 16 ವರ್ಷದ ಬಾಲಕಿಯೆಂಬುದನ್ನು ಗೌರವಿಸಿ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com