'ಫಿರಂಗಿ' ಸಿನೆಮಾದ ಮೂಲಕ ನಿರ್ಮಾಪಕನಾದ ಕಪಿಲ್ ಶರ್ಮ

ಖ್ಯಾತ ಕಿರುತೆರೆ ಹಿಂದಿ ರಿಯಾಲಿಟಿ ಹಾಸ್ಯ ಕಾರ್ಯಕ್ರಮದ ನಿರ್ವಾಹಕ ಮತ್ತು ಹಾಸ್ಯ ನಟ ಕಪಿಲ್ ಶರ್ಮ ಈಗ 'ಫಿರಂಗಿ' ಚಿತ್ರದ ಜೊತೆಗೆ ನಿರ್ಮಾಪಕರಾಗಲಿದ್ದಾರೆ.
ಹಾಸ್ಯ ನಟ ಕಪಿಲ್ ಶರ್ಮ
ಹಾಸ್ಯ ನಟ ಕಪಿಲ್ ಶರ್ಮ
ಮುಂಬೈ: ಖ್ಯಾತ ಕಿರುತೆರೆ ಹಿಂದಿ ರಿಯಾಲಿಟಿ ಹಾಸ್ಯ ಕಾರ್ಯಕ್ರಮದ ನಿರ್ವಾಹಕ ಮತ್ತು ಹಾಸ್ಯ ನಟ ಕಪಿಲ್ ಶರ್ಮ ಈಗ 'ಫಿರಂಗಿ' ಚಿತ್ರದ ಜೊತೆಗೆ ನಿರ್ಮಾಪಕರಾಗಲಿದ್ದಾರೆ. 
ಈ ಸಿನೆಮಾದಲ್ಲಿ ತಮ್ಮ ಪಾತ್ರಕ್ಕಾಗಿ ತೀವ್ರ ತರಬೇತಿ ಪಡೆಯುತ್ತಿರುವ ನಟ  ಈ ಸುದ್ದಿಯನ್ನು ಶನಿವಾರ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. 
"ಬಾಲಿವುಡ್ ನಲ್ಲಿ ನಿರ್ಮಾಪಕನಾಗಿ ನನ್ನ ಮೊದಲ ಸಿನೆಮಾ 'ಫಿರಂಗಿ' ಶೀಘ್ರದಲ್ಲೇ ಬರಲಿದೆ... ನಿಮ್ಮೆಲ್ಲರ ಆಶೀರ್ವಾದ ಬೇಕು" ಎಂದು ೨೦೧೫ ರಲ್ಲಿ 'ಕಿಸ್ ಕಿಸ್ಕೊ ಪ್ಯಾರ್ ಕರೂ' ಸಿನೆಮಾದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಕಪಿಲ್ ಟ್ವೀಟ್ ಮಾಡಿದ್ದಾರೆ. 
ಸಿನೆಮಾದ ಬಗ್ಗೆ ಇನ್ನಿತರ ವಿವರಗಳು ತಿಳಿಯಬೇಕಿವೆ. 'ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್-೩'ರಲ್ಲಿ ಗೆದ್ದಾಗ ಕಪಿಲ್ ಬೆಳಕಿಗೆ ಬಂದಿದ್ದರು. ನಂತರ ಹಲವು ರಿಯಾಲಿಟಿ ಕಾರ್ಯಕರ್ಮಗಳನ್ನು ನಡೆಸಿಕೊಟ್ಟಿದ್ದರು. ಈಗ 'ದ ಕಪಿಲ್ ಶರ್ಮ ಶೋ' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com