ಜಲ್ಲಿಕಟ್ಟು ವಿವಾದ: 'ಪೆಟಾ' ವಿರುದ್ಧ ಕಮಲ್ ಹಾಸನ್ ವಾಗ್ದಾಳಿ

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ವಿರುದ್ಧ ಹೋರಾಟ ನಡೆಸುತ್ತಿರುವ ಪೆಟಾ ವಿರುದ್ಧ ನಟ ಕಮಲ್ ಹಾಸನ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ...
ನಟ ಕಮಲ್ ಹಾಸನ್
ನಟ ಕಮಲ್ ಹಾಸನ್

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ವಿರುದ್ಧ ಹೋರಾಟ ನಡೆಸುತ್ತಿರುವ ಪೆಟಾ ವಿರುದ್ಧ ನಟ ಕಮಲ್ ಹಾಸನ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಪೆಟಾ ವಿರುದ್ಧ ಟ್ವಿಟರ್ ನಲ್ಲಿ ಹರಿಹಾಯ್ದಿರುವ ಅವರು, ಭಾರತೀಯ ಗೂಳಿಗಳನ್ನು ತಡೆಯುವ ಅರ್ಹತೆ ನಿಮಿಗಿಲ್ಲ. ಭಾರತೀಯ ಗೂಳಿಗಳನ್ನು ತಡೆಯುವ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೋಡವ ಗೂಳಿ ಕಾಳಗವನ್ನು ನಿಯಂತ್ರಿಸಿ ಎಂದು ಹೇಳಿದ್ದಾರೆ.

ಕೊನೆಗೂ ಜನತೆ ನಿಜವಾದ ಪ್ರಜಾಪ್ರಭುತ್ವದ ರುಚಿಯನ್ನು ನೋಡಿದ್ದಾರೆ. ನಾಯಕರು ಆಳುತ್ತಿದ್ದ ದಿನಗಳು ಹೋಗಿದೆ. ನಮಗೆ ನಿಜವಾದ ದಾರಿ ತೋರಿಸುವ ಹಾಗೂ ಸಾಮಾಜಿಕ ಸುಧಾರಣೆ ತರುವಂತಹ ಜನರು ಬೇಕಿದ್ದಾರೆಂದು ತಿಳಿಸಿದ್ದಾರೆ.

ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿರುವ ಕುರಿತಂತೆ ತಮಿಳುನಾಡಿನ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರೀಯ ಸ್ಥಾನವಾಗಿರುವ ಮರೀನಾ ಬೀಚ್ ಬಳಿ ಲಕ್ಷಾಂತರ ಜನರು ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸಿದ್ದರು. ತಮಿಳುನಾಡು ಜನತೆಯ ಪ್ರತಿಭಟನೆಗೆ ಕೊನೆಗೂ ಮಣಿದಿದ್ದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿತ್ತು.

ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ನಟ ಕಮಲ್ ಹಾಸನ್ ಅವರು ಈ ಹಿಂದೆ ಟ್ವಿಟರ್ ನಲ್ಲಿ ತಮಿಳುನಾಡು ಜನತೆಯನ್ನು ಕೊಂಡಾಡಿದ್ದರು. ಶಹಭಾಸ್‌, ತಮಿಳುನಾಡು ಜನತೆ. ನಮ್ಮ ಅಸಮಾಧಾನಕ್ಕೆ ಪ್ರತಿಭಟನೆಯೊಂದು ಮಾದರಿಯಾಗಿತ್ತು. ಈಗಾಗಲೇ ನಾವು ಸಾಕಷ್ಟು ಗಾಯಗೊಂಡಿದ್ದೇವೆ. ಇನ್ನು ಯಾವುದೇ ಬಂದ್ ಬೇಡ. ಗಾಯ ವಾಸಿಯಾಗುವ ಸಮಯ ಬಂದಿದೆ. 1930ರಿಂದ ಮದ್ರಾಸ್ ನಿಂದ ಆರಂಭವಾದ ನಮ್ಮ ಈ ನಾಗರೀಕ ಅವಿಧೇಯತೆಯ ಚಳುವಳಿ ಇಂದು ಯಶಸ್ವಿಯಾಗಿ ಅಂತ್ಯಗೊಂಡಿದೆ. ಇದಕ್ಕೆ ಜನತೆಯೇ ಕಾರಣ. ಈ ಸಂತಸದ ಕ್ಷಣ ಜನತೆಯದ್ದು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com