'ಮುಂಬೈ' ಸಂಬಂಧವನ್ನು ಬಿಚ್ಚಿಟ್ಟ ನಟ ಕೃಷ್ಣ

'ಡೆಮೋ ಕೊಡೋಕ್ಕೆ ನಾನೇನು ೩ ಇಂಚು ಸಂತೂರ್ ಸೋಪ್ ಅಲ್ಲ, ೬ ಅಡಿ ಬುಲೆಟ್/ ಚಸ್ಮಾ ಲಗೀ ತೊ ಬಚಾ ನಹಿ ಬನ್ ಸಕ್ತಾ ರೇ, ಸಿರ್ಫ್ ಬಚ್ಚ ಹೈ/ ಬೆಂಗಳೂರು ಸಾಫ್ಟ್ವೇರ್ ಸಿಟಿ ಕಣೋ, ಒದ್ದೋನ್ಗೆ ಮಾತ್ರ
'ಮುಂಬೈ' ಸಿನೆಮಾದಲ್ಲಿ ನಟ ಕೃಷ್ಣ
'ಮುಂಬೈ' ಸಿನೆಮಾದಲ್ಲಿ ನಟ ಕೃಷ್ಣ
ಬೆಂಗಳೂರು: 'ಡೆಮೋ ಕೊಡೋಕ್ಕೆ ನಾನೇನು ೩ ಇಂಚು ಸಂತೂರ್ ಸೋಪ್ ಅಲ್ಲ, ೬ ಅಡಿ ಬುಲೆಟ್/ ಚಸ್ಮಾ ಲಗೀ ತೊ ಬಚಾ ನಹಿ ಬನ್ ಸಕ್ತಾ ರೇ, ಸಿರ್ಫ್ ಬಚ್ಚ ಹೈ/ ಬೆಂಗಳೂರು ಸಾಫ್ಟ್ವೇರ್ ಸಿಟಿ ಕಣೋ, ಒದ್ದೋನ್ಗೆ ಮಾತ್ರ ಕೆಲಸ.. ಮುಂಬೈ ಹಾರ್ಡ್ವೇರ್ ಸಿಟಿ... ಇಲ್ಲಿ ಚುಚ್ದೋನಿಗೆ ಕೆಲಸ/ ಮುಂಬೈ ನ ಕೊಯಿ ಭಾಯಿ ಕಾ ಹೈ, ನ ಕಿಸಿ ಬಾಪ್ ಕ"  ಇವು ನಟ ಕೃಷ್ಣ ಅವರ ಮುಂದಿನ ಚಿತ್ರ 'ಮುಂಬೈ' ನ ಕೆಲವು ಡೈಲಾಗ್ ಗಳು. 
ಐದು ಪ್ರಮುಖ ಆಕ್ಷನ್ ದೃಶ್ಯಗಳು ಮತ್ತು ಒಂದು ಚೇಸ್ ಹೊಂದಿರುವ ಈ ಸಿನೆಮಾ ಪಕ್ಕ ಮಸಾಲ ಸಿನೆಮಾವಾಗಿ ನಾಳೆ ತೆರೆಕಾಣಲಿದೆ. 'ಮುಂಬೈ' ಭೂತಜಗತ್ತಿನ ಹಿನ್ನಲೆಯಲ್ಲಿ ಕಟ್ಟಿಕೊಡುವ ಭಾವುಕತೆಯ ಡ್ರಾಮಾ ಇದು ಎನ್ನುತ್ತಾರೆ ನಟ ಕೃಷ್ಣ. 
"ಈ ಸಿನೆಮಾದ ಭಾಗವಾಗುವುದಕ್ಕೆ ಅವಕಾಶ ನೀಡಿದ ರಾಮು ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದನ್ನು ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರ ಎಂದು ಕರೆದುಬಿಡಬಹುದು" ಎನ್ನುತ್ತಾರೆ ಕೃಷ್ಣ. ಇದನ್ನು ಎಸ್ ಆರ್ ರಮೇಶ ನಿರ್ದೇಶಿಸಿದ್ದಾರೆ. 'ಲಾಕ್ ಅಪ್ ಡೆತ್', 'ಸಿಂಹದ ಮರಿ', ' ಎ ಕೆ ೪೭', 'ಕಲಾಸಿಪಾಳ್ಯ', 'ಶಿವಾಜಿನಗರ' ಸಿನೆಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ರಾಮು ಅವರ ಹೊಸ ಚಿತ್ರ ಇದು. "ಇಷ್ಟು ದೊಡ್ಡ ಬ್ಯಾನರ್ ನಲ್ಲಿ ಕೊನೆಗೂ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ" ಎನ್ನುತ್ತಾರೆ ನಟ. 
ಪದವಿ ಪೂರ್ವ ಶಿಕ್ಷಣದ ಸಮಯದಲ್ಲಿ ಮುಂಬೈ ನಗರ ಸಂಬಂಧವನ್ನು ನೆನಪಿಸಿಕೊಳ್ಳುವ ನಟ "ಟೆನಿಸ್ ಪಂದ್ಯಾವಳಿಗಳಿಗಾಗಿ ನಾನು ಮುಂಬೈ ನಗರಕ್ಕೆ ತೆರಳುತ್ತಿದ್ದೆ. ನನಗೆ ಬಿರಿಯಾನಿ ಎಂದರೆ ಬಹಳ ಇಷ್ಟೇ. ಮುಂಬೈನ ಬಾರ್ ಮತ್ತು ರೆಸ್ಟರೆಂಟ್ ಗಳಲ್ಲಿ ಅದ್ಭುತ ಬಿರಿಯಾನಿ ದೊರೆಯುತ್ತದೆ ಎಂದು ನನಗೆ ಹೇಳಿದ್ದರು. ಆದುದರಿಂದ ನಾನು ಒಳಗೆ ಹೊಕ್ಕೆ. ಆದರೆ ಒಳಗೆ ಹಲವು ವಿಚಿತ್ರ ಚಟುವಟಿಕೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆಬಂತು. ನಾನು ಬಿರಿಯಾನಿಗೆ ಬೇಡಿಕೆಯಿಟ್ಟರು ಅಲ್ಲಿನ ಚಟುವಟಿಕೆಗಳಿಂದ ಎಷ್ಟು ಭಯಭೀತನಾದೆನೇದರೆ ಬಿರಿಯಾನಿ ಅಲ್ಲಿಯೇ ಬಿಟ್ಟು ಹೊರಗೆ ಓಡಿ ಬಂದೆ" ಎಂದು ನೆನಪಿಸಿಕೊಳ್ಳುತ್ತಾರೆ ಕೃಷ್ಣ. 
ನಾಳೆ ಬಿಡುಗಡೆಯಾಗಲಿರುವ 'ಮುಂಬೈ' ಸಿನೆಮಾದಲ್ಲಿ ತೇಜು ನಾಯಕನಟಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com