ಶ್ರುತಿ ಮತ್ತು ಶಾನ್ವಿಯವರ ಇಟಲಿ ಡೈರಿ

ನಟಿ ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ, 'ತಾರಕ್' ಸಿನೆಮಾ ಚಿತ್ರೀಕರಣಕ್ಕೆ ಇಟಲಿ ದೇಶದಲ್ಲಿದ್ದು ಬಿಡುವಿನ ಸಮಯದಲ್ಲಿ ತಮ್ಮ ಪ್ರವಾಸದಾಸೆಯನ್ನು ಕೂಡ ತಣಿಸಿಕೊಳ್ಳುತ್ತಿದ್ದಾರೆ.
ಇಟಲಿಯಲ್ಲಿ ಶಾನ್ವಿ ಶ್ರೀವಾಸ್ತವ
ಇಟಲಿಯಲ್ಲಿ ಶಾನ್ವಿ ಶ್ರೀವಾಸ್ತವ
Updated on: 
ಬೆಂಗಳೂರು: ನಟಿ ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ, 'ತಾರಕ್' ಸಿನೆಮಾ ಚಿತ್ರೀಕರಣಕ್ಕೆ ಇಟಲಿ ದೇಶದಲ್ಲಿದ್ದು ಬಿಡುವಿನ ಸಮಯದಲ್ಲಿ ತಮ್ಮ ಪ್ರವಾಸದಾಸೆಯನ್ನು ಕೂಡ ತಣಿಸಿಕೊಳ್ಳುತ್ತಿದ್ದಾರೆ. 
ಪ್ರಕಾಶ್ ಜಯಣ್ಣ ನಿರ್ದೇಶನದ ಈ ಸಿನೆಮಾದಲ್ಲಿ ದರ್ಶನ್ ನಾಯಕ ನಟ. ಈಗ ಇಬ್ಬರೂ ನಟಿಯರು ಯೂರೋಪಿನ ಇಟಲಿಯ ಮೂಲೆ ಮೂಲೆಗಳಲ್ಲಿ ವಿವಿಧ ತಾಣಗಳನ್ನು ಅನ್ವೇಷಿಸಿ ಸುತ್ತಾಡುತ್ತಿರುವ ಫೋಟೋಗಳು ಲಭ್ಯವಾಗಿವೆ. 
"ನಾವಿಲ್ಲಿ ಕೆಲಸಕ್ಕಾಗಿ ಬಂದಿದ್ದರೂ, ಪ್ರವಾಸವನ್ನು ಹೇಗೋ ಹೊಂದಿಸಿಕೊಳ್ಳುತ್ತಿದ್ದೇವೆ. ಈ ದೇಶದ ಸೌಂದರ್ಯ ಅದ್ಭುತ" ಎನ್ನುತ್ತಾರೆ ಶ್ರುತಿ. 
ಈ ಇಬ್ಬರೂ ನಟಿಯರು ಒಟ್ಟೆಗೆ ಅಲ್ಬೇರೋಬೆಲ್ಲೊ ಮತ್ತು ಅಸ್ಸಿಸಿಗೆ ಪ್ರವಾಸ ಬೆಳೆಸಿದ್ದರಂತೆ. "ಸ್ವಿಟ್ಸರ್ ಲ್ಯಾಂಡ್ ನ ಕೆಲವು ಪ್ರದೇಶಗಳಂತೂ ಮಾಯಾಜಾಲದಂತೆ" ಎನ್ನುವ ಶ್ರುತಿ "ಇಲ್ಲಿನ ಜನರ ಆತಿಥ್ಯ ಮತ್ತು ಸಂಸ್ಕೃತಿಗೆ ಮಾರುಹೋಗಿದ್ದೇನೆ. ಆಹಾರ, ವ್ಯವಸ್ಥೆ, ಜನಜೀವನ ಶೈಲಿ ಎಲ್ಲವು ನಮ್ಮ ಭಾರತಕ್ಕಿಂತ ವಿಭಿನ್ನ" ಎನ್ನುತ್ತಾರೆ. 
ಇಟಲಿ ಮತ್ತು ಸ್ವಿಟ್ಸರ್ ಲ್ಯಾಂಡ್ ಸೌಂದರ್ಯವನ್ನು ಕಂಡು ಬೆರಗುಗೊಂಡಿರುವ ನಟಿ ಶಾನ್ವಿ "ಇಟಲಿಯಲ್ಲಿ ಹೆಚ್ಚು ಜನ ನೋಡದೆ ಇರುವ ಹಲವು ಸುಂದರ ಹಳ್ಳಿಗಳಿವೆ ಮತ್ತು ಅವುಗಳು ಪ್ರವಾಸಕ್ಕೆ ಯೋಗ್ಯ" ಎನ್ನುತ್ತಾರೆ. 
ಅಲ್ಲಿನ ಪ್ರಾದೇಶಿಕರ ಜೊತೆಗೆ ವ್ಯವಹರಿಸಲು ನಟಿ ಸನ್ನೆಯ ಭಾಷೆ ಬಳಸುತ್ತಿದ್ದಾರಂತೆ. "ನಮ್ಮ ಶೂಟಿಂಗ್ ಜಾಗ ಅಲ್ಲಿನ ಪ್ರಾದೇಶಿಕರಿಗೆ ಪ್ರವಾಸಿ ತಾಣವಾಗಿತ್ತು. ನಾವೆಲ್ಲಾ ಆಕರ್ಷಕವಾಗಿ ಬಟ್ಟೆ ತೊಟ್ಟುಕೊಂಡು ಸಿದ್ಧವಾಗಿರುವುದನ್ನು ಕಾಣುತ್ತಿದ್ದ ಅಲ್ಲಿನ ನಿವಾಸಿಗಳು  ನಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು" ಎನ್ನುವ ಶಾನ್ವಿ ಈ ಪ್ರವಾಸ ಹಲವು ಪಾಠಗಳನ್ನು ಕೂಡ ಕಲಿಸಿತು ಎನ್ನುತ್ತಾರೆ. 
ಚಿತ್ರತಂಡ ಇಟಲಿಯಿಂದ ಜುಲೈ ೫ಕ್ಕೆ ಹಿಂದಿರುಗಲಿದ್ದು, ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣ ಮುಂದುವರೆಯುಯಲಿದೆ. 
ದುಶ್ಯಂತ್ ನಿರ್ಮಿಸುತ್ತಿರುವ 'ತಾರಕ್' ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ ವಿ ಕೃಷ್ಣ ಕುಮಾರ್ ಸಿನೆಮ್ಯಾಟೋಗ್ರಾಫರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com