ಬರ್ಲಿನ್ ನಲ್ಲಿ ನಟಿ ಪ್ರಿಯಾಂಕಾ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ
ಸಿನಿಮಾ ಸುದ್ದಿ
ಪ್ರಧಾನಿ ಮೋದಿ ಭೇಟಿ ವೇಳೆ ತುಂಡುಡುಗೆ: ಪುತ್ರಿ ಪ್ರಿಯಾಂಕಾಳನ್ನು ಸಮರ್ಥಿಸಿಕೊಂಡ ತಾಯಿ
ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವೇಳೆ ತುಂಡುಡುಗೆ ತೊಟ್ಟು ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾಳನ್ನು ತಾಯಿ ಮಧು ಅವರು...
ಮುಂಬೈ: ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವೇಳೆ ತುಂಡುಡುಗೆ ತೊಟ್ಟು ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾಳನ್ನು ತಾಯಿ ಮಧು ಅವರು ಸಮರ್ಥಿಸಿಕೊಂಡಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ನಟಿ ಪ್ರೀಯಾಂಕಾ ಚೋಪ್ರಾ ಅವರು ಕಳೆದ ಮೇ ತಿಂಗಳಿನಲ್ಲಿ ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಮೋದಿ ಜತೆಗೆ ಕುಶಲೋಪರಿ ನಡೆಸುತ್ತಿರುವ ತಮ್ಮ ಫೋಟೋವನ್ನು ಇನ್'ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದರು.
ಪ್ರಿಯಾಂಕಾ ಹಂಚಿಕೊಂಡಿದ್ದ ಈ ಫೋಟೋಗೆ ಕೆಲವರು ಟೀಕೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದರು. ತುಂಡುಡುಗೆ ಧರಿಸಿವ ಮೂಲಕ ಪ್ರಿಯಾಂಕಾ ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದ್ದಾರೆ. ಪ್ರಧಾನಮಂತ್ರಿಗಳನ್ನು ಭೇಟಿಯಾಗುವ ವೇಳೆ ಪ್ರಿಯಾಂಕಾ ಸರಿಯಾದ ರೀತಿಯಲ್ಲಿ ಬಟ್ಟೆಯನ್ನು ತೊಟ್ಟಿಲ್ಲ. ಇದು ಮೋದಿಯವರಿಗೆ ಅವಮಾನ ಮಾಡಿದಂತೆ ಎಂದೆಲ್ಲಾ ಟೀಕೆಗಳನ್ನು ಮಾಡಿದ್ದರು. ಟೀಕಾಕಾರಿಗೆ ಪ್ರಿಯಾಂಕಾ ಕೂಡ ಸರಿಯಾದ ರೀತಿಯಲ್ಲಿಯೇ ಉತ್ತರವನ್ನು ನೀಡಿದ್ದರು. ಮತ್ತಷ್ಟು ತುಂಡುಡುಗೆ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.
ಇದೀಗ ಪ್ರಿಯಾಂಕಾಳನ್ನು ಸಮರ್ಥಿಸಿಕೊಂಡಿರುವ ತಾಯಿ ಮಧು ಅವರು, ಸಾಮಾಜಿಕ ಜಾಲತಾಣ ಬಳಕೆದಾರರು, ಪತ್ರಕರ್ತರು ಸತ್ಯವನ್ನು ತಿಳಿಯದೆಯೇ ಏನನ್ನು ಬೇಕಾದರೂ ಬರೆಯುತ್ತಾರೆ. ತಪ್ಪು ಮಾಡಿಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ ಎಂದು ನಾನು ನನ್ನ ಮಗಳಿಗೆ ಹೇಳಿಕೊಟ್ಟಿದ್ದೇನೆ. ಬರ್ಲಿನ್ ನಲ್ಲಿ ಪ್ರಿಯಾಂಕಾ 'ಬೇವಾಚ್' ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಳು. ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ಬಟ್ಟೆ ಬದಲಿಸಿ ಬಂದು ಮೋದಿಯವರನ್ನು ಭೇಟಿಯಾಗುವಷ್ಟು ಸಮಯ ಆಕೆಗಿರಲಿಲ್ಲ. ಮೋದಿಯವರ ಭೇಟಿ ಪೂರ್ವ ನಿಯೋಜಿತವಾಗಿರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ