ಬಿಜೆಪಿಯ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡಿದ್ದೇನೆ. ರಾಜಕೀಯ ಸೇರ್ಪಡೆಗೆ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಪ್ರೇರಣೆಯಾಗಿದೆ. ರಾಜಕೀಯ ಪ್ರವೇಶ ಕೇವಲ ಆಲೋಚನೆಯಷ್ಟೇ, ರಾಜಕೀಯ ಪ್ರವೇಶ ಕುರಿತು ಇಷ್ಟು ಬೇಗ ದೃಢೀಕರಣ ನೀಡಲು ಸಾಧ್ಯವಿಲ್ಲ. ರಾಜಕೀಯ ಹೊಸ ಜವಾಬ್ದಾರಿಯಾಗಿದ್ದು, ಚಿತ್ರರಂಗವನ್ನು ಬಿಡುವುದಿಲ್ಲ. ಶೀಘ್ರದಲ್ಲೇ ಹೊಸ ಚಿತ್ರದ ಕುರಿತಂತೆ ಮಾಹಿತಿಗಳನ್ನು ನೀಡುತ್ತೇನೆಂದು ತಿಳಿಸಿದ್ದಾರೆ.