ಇದೇ ವೇಳೆ ನಟಿಯ ಹೆಸರನ್ನು ಬಹಿರಂಗ ಪಡಿಸಿದ್ದಕ್ಕೆ ಉತ್ತರಿಸಿದ ಅವರು, ಸಂತ್ರಸ್ತೆ ಹೆಸರನ್ನು ಬಳಕೆ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಮಾಧ್ಯಮಗಳೇ ಆಕೆಯ ಹೆಸರನ್ನು ಬಹಿರಂಗ ಪಡಿಸಿವೆ. ಹೆಸರನ್ನು ಮುಚ್ಚಿಡುವುದರಿಂದ, ಹೆಸರನ್ನು ಬಹಿರಂಗ ಪಡಿಸುವುದರಿಂದ ಯಾವ ತಪ್ಪೂ ಇಲ್ಲ. ದ್ರೌಪದಿ ಎಂದು ಕರೆಯಬೇಕಿದ್ದರೆ, ಆ ಹೆಸರನ್ನೇ ಕರೆಯಿರಿ. ಆದರೆ, ಆಕೆಯನ್ನು ಮಹಿಳೆಯೆಂದು ಮಾತ್ರ ಬಿಂಬಿಸಬೇಡಿ ಎಂದು ತಿಳಿಸಿದ್ದಾರೆ.