ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರಕ್ಕೆ ನಿಖಿಲ್ ಕುಮಾರ್ ಎಂಟ್ರಿ

ತಮ್ಮ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡರೇ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಪುತ್ರ ...
ದರ್ಶನ್ ಮತ್ತು ನಿಖಿಲ್ ಕುಮಾರ್
ದರ್ಶನ್ ಮತ್ತು ನಿಖಿಲ್ ಕುಮಾರ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ  ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಕಾಣಿಸಿಕೊಂಡರೇ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ನಟಿಸಲಿದ್ದಾರೆ.
ಬಹುತಾರಾಗಣದ ಈ ಕುರುಕ್ಷೇತ್ರದಲ್ಲಿ  ಅಂಬರೀಶ್, ರವಿಚಂದ್ರನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ಗಳ ಅಭಿನಯವಿದೆ, ನಿರ್ಮಾಪಕ ಮುನಿರತ್ನ ಅವರಿಗಾಗಿ ನಾನು ಈ ಪಾತ್ರ ಒಪ್ಪಿಕೊಂಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ಇಷ್ಟ. ಜೊತೆಗೆ ಅವರು ಸಿನಿಮಾ ತಂಡವನ್ನು ನಿರ್ವಹಿಸುವ ಕ್ರಮ ನನಗೆ ಮೆಚ್ಚುಗೆಯಾಗಿದೆ ಎಂದು ನಿಖಿಲ್ ಹೇಳಿದ್ದಾರೆ.
ಅಭಿಮನ್ಯು ಪಾತ್ರದಲ್ಲಿ ನಿಖಿಲ್ ನಟಿಸಲಿದ್ದು, ಕಳೆದ ಮೂರು ತಿಂಗಳ ಹಿಂದೆಯೇ ನಾವು ಚರ್ಚಿಸಿದ್ದೆವು.  ನಾಲ್ಕಾರು ಸುತ್ತಿನ ಮಾತುಕತೆಯ ನಂತರವೇ ನಾನು ನಟಿಸಲು ಒಪ್ಪಿಕೊಂಡಿದ್ದು ಎಂದು ನಿಖಿಲ್ ತಿಳಿಸಿದ್ದಾರೆ. ಅಭಿಮನ್ಯು ಪಾತ್ರದ ನಿಖಿಲ್ ಡ್ರೆಸ್ ರೆಡಿಯಾಗಿದ್ದು, ಸೋಮವಾರ ಹೈದರಾಬಾದ್ ನಲ್ಲಿ ಫೋಟೋ ಶೂಟ್ ನಡೆಯಲಿದೆ.
ಯಾವುದೇ ಒಬ್ಬ ನಾಯಕ ನಟ ಸಣ್ಣ ಪಾತ್ರದಲ್ಲಿ ನಟಿಸಲು ನಿರಾಕರಿಸುತ್ತಾನೆ. ಆದರೆ ಇಂಮದು ಒಬ್ಬ ನಟ ಉತ್ತಮ ವಾದದ್ದನ್ನು ಆಯ್ಕೆ ಮಾಡಿದರೇ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಹೆಸರು ಸಂಪಾದಿಸಬಹುದು. ಅದಕ್ಕಾಗಿ ನೀವು 100 ಸಿನಿಮಾ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಮಹಾಭಾರತ ಪುರಾಣ ಕಥೆಯಾದ ಕುರುಕ್ಷೇತ್ರದಲ್ಲಿ ನಟಿಸಲು ಅಪರೂಪದ ಅವಕಾಶ ಸಿಕ್ಕಿದೆ. ಇದು ಕಾಲ್ಪನಿಕ ಕಥೆಯಲ್ಲ, ಇತಿಹಾಸವನ್ನು ನಾವು ಪ್ರೇಕ್ಷಕರ ಮಂದೆ ಇಡುತ್ತಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿಖಿಲ್ ನಾಲ್ಕನೇ ಸಿನಿಮಾ ನಾಡಪ್ರಭು ಕೆಂಪೇಗೌಡ ಈಗಾಗಲೇ ನಿರ್ಧರಿತವಾಗಿದೆ. ಇದಕ್ಕಾಗಿ ನಿಖಿಲ್ ತಂದೆ ಹಾಗೂ ನಿರ್ಮಾಪಕ ಕುಮಾರಸ್ವಾಮಿ ತಯಾರಿ ನಡೆಸುತ್ತಿದ್ದು, ಚಿತ್ರಕಥೆ ಬರೆಯಲು ಉತ್ತಮ ಸಂಭಾಷಣೆಗಾರರಿಗಾಗಿ ಹುಡುಕಾಟ ನಡೆಸಿದ್ದಾರೆ. 
8 ತಿಂಗಳಲ್ಫ್ರೀಲಿ  ಪ್ರೊಡಕ್ಷನ್ ವರ್ಕ್ ಮುಗಿಯಲಿದೆ. ಮುಂದಿನ ವರ್ಷದ ಏಪ್ರಿಲ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ನಾನು ಚಿತ್ರರಂಗಕ್ಕೆ ಎಂಟ್ರಿ ಪಡೆಯುವ ಮುನ್ನವೇ ಕೆಂಪೇಗೌಡ ಸಿನಿಮಾ ಬಗ್ಗೆ ನನ್ನ ಮನೆಯಲ್ಲಿ ಚರ್ಚೆ ನಡೆದಿತ್ತು. ಕೆಂಪೇಗೌಡ ತಕ್ಷಣದ ಯೋಜನೆಯಲ್ಲ, ಅಭಿಮನ್ಯ ಪಾತ್ರದಲ್ಲಿ ಜನ ನನ್ನ ನೋಡಿದ ಮೇಲೆ ಮತ್ತೊಂದು ಐತಿಹಾಸಿಕ ಚಿತ್ರ ಕೆಂಪೇಗೌಡದಲ್ಲಿ ನನ್ನನ್ನು ನೋಡಲಿದ್ದಾರೆ.
ಪ್ರಾಜೆಕ್ಟ್  ಬಗ್ಗೆ ಹೆಚ್ಚಿನದಾಗಿ ಮಾತನಾಡಲು ನಿಖಿಲ್ ನಿರಾಕರಿಸಿದ್ದಾರೆ. ನೃತ್ಯ ನಿರ್ದೇಶಕ ಹರ್ಷ ಕೆಂಪೇಗೌಡನ ಜವಾಬ್ದಾರಿ ಹೊರಲಿದ್ದಾರೆ. ಈ ಸಂಬಂಧ ನಾನು ಅವರ ಜೊತೆ ಮಾತನಾಡಿ ನಂತರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com