ರವಿ ಶ್ರೀವತ್ಸ ನಿರ್ದೇಶನದ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ರಾಗಿಣಿ
ನಾನೇ ನೆಕ್ಸ್ಟ್ ಸಿಎಂ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ರಾಗಿಣಿ ದ್ವಿವೇದಿ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ...
ನಾನೇ ನೆಕ್ಸ್ಟ್ ಸಿಎಂ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ರಾಗಿಣಿ ದ್ವಿವೇದಿ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿಚ್ಚು ಚಿತ್ರದ ಶೂಟಿಂಗ್ ಮುಗಿಸಿರುವ ರಾಗಿಣಿ, ಗಾಂಧಿಗಿರಿ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದಾದ ನಂತರ ರಾಗಿಣಿ ರವಿ ಶ್ರೀವತ್ಸ ನಿರ್ದೇಶನದ ಅಂಡರ್ ವರ್ಲ್ಡ್ ಕಥೆಯಾಧಾರಿತ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ರಾಗಿಣಿ ಹೇಳಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿದ ರವಿ ಶ್ರೀವತ್ಸ ಚಿತ್ರದ ಕುರಿತು ಒಂದುವರೆ ವರ್ಷದ ಹಿಂದೆಯೇ ರಾಗಿಣಿಗೆ ಹೇಳಿದ್ದೆ ಆದರೆ ಈ ಬಗ್ಗೆ ಆಗ ರಾಗಿಣಿ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಈಗ ರಾಗಿಣಿ ಚಿತ್ರಕ್ಕೆ ಓಕೆ ಎಂದಿದ್ದು ಚಿತ್ರದ ಚಿತ್ರೀಕರಣದ ಕುರಿತಂತೆ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.
ಮಾಲಾ ಶ್ರೀ ಅಭಿನಯದ ಲೇಡಿ ಪೊಲೀಸ್ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಎಂಟ್ರಿಕೊಟ್ಟೆ. ಇದೀಗ 13 ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಶ್ರೀವತ್ಸ ಹೇಳಿದ್ದಾರೆ.