ಬೆಂಗಳೂರು:ಯಶ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಯಶ್ ಗೆ ನಾಯಕಿಯಾಗಿ ನಟಿಸಲಿದ್ದಾರೆ.
ಹರ್ಷ ನಿರ್ದೇಶನ ಮುಂದಿನ ಸಿನಿಮಾದಲ್ಲಿ ಯಶ್ ಗೆ ರಶ್ಮಿಕಾ ಹೀರೋಯಿನ್ ಆಗಲಿದ್ದಾರೆ. ಯಶ್ ಮತ್ತು ಹರ್ಷ ಅವರ ಬಾಕಿ ಉಳಿದಿರುವ ಪ್ರಾಜೆಕ್ಟ್ ಗಳೆಲ್ಲಾ ಮುಗಿದ ಮೇಲೆ ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ. ಸದ್ಯ ರಶ್ಮಿಕಾ ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಣಾ ಸಿನಿಮಾದಲ್ಲಿ ಯಶ್ ಗೆ ಜೋಡಿಯಾಗಿ ನಟಿಸಲು ಚಿತ್ರತಂಡ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಿದ್ದಾರೆ, ಎರಡು ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕೆಯಾದರೇ ಯಶ್ ಗೆ ನಾಯಕಿಯಾಗಲಿದ್ದಾರೆ.
ರಶ್ಮಿಕಾ ಅವರ ಎಲ್ಲಾ ಕೆಲಸಗಳನ್ನು ಅವರ ತಾಯಿಯೇ ನೋಡಿಕೊಳ್ಳುತ್ತಿದ್ದು, ನನಗೂ ಕೂಡ ಈ ರೂಮರ್ಸ್ ಕಿವಿಗೆ ಬಿದ್ದಿದೆ. ಯಶ್ ಜೊತೆ ಕೆಲಸ ಮಾಡಲು ರಶ್ಮಿಕಾಗೆ ಆಸಕ್ತಿಯಿದೆ. ಅವಕಾಶ ಸಿಕ್ಕರೇ ಖಂಡಿತಾ ಯಶ್ ಜೊತೆ ರಶ್ಮಿಕಾ ನಟಿಸಲಿದ್ದಾರೆ ಎಂದು ಆಕೆ ತಾಯಿ ತಿಳಿಸಿದ್ದಾರೆ.