ದರ್ಶನ್ ಕುರುಕ್ಷೇತ್ರ: ಕರ್ಣನ ಪಾತ್ರ ನಿರಾಕರಿಸಿದ ಶಿವರಾಜ್ ಕುಮಾರ್!

ದರ್ಶನ್ 50ನೇ ಚಿತ್ರ ಕುರುಕ್ಷೇತ್ರದಲ್ಲಿ ನಟ ಶಿವರಾಜ್ ಕುಮಾರ್ ಕರ್ಣನ ಪಾತ್ರ ನಿರ್ವಹಿಸುತ್ತಾರೆ ಎಂದು ನಿನ್ನೆಯಷ್ಟೇ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on
ಬೆಂಗಳೂರು: ದರ್ಶನ್ 50ನೇ ಚಿತ್ರ ಕುರುಕ್ಷೇತ್ರದಲ್ಲಿ ನಟ ಶಿವರಾಜ್ ಕುಮಾರ್ ಕರ್ಣನ ಪಾತ್ರ ನಿರ್ವಹಿಸುತ್ತಾರೆ ಎಂದು ನಿನ್ನೆಯಷ್ಟೇ ವರದಿಯಾಗಿತ್ತು.
ಆದರೆ ಕರ್ಣನ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಶಿವಣ್ಣ ಆಫರ್ ನಿರಾಕರಿಸಿದ್ದಾರೆ. ತಾವು ವಿಲ್ಲನ್ ಮತ್ತು ಟಗರು ಸಿನಿಮಾಗಳ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದು, ಕುರುಕ್ಷೇತ್ರಕ್ಕೆ ಡೇಟ್ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ.
ಕರ್ಣನ ಪಾತ್ರ ಮಾಡಲು ಶಿವಣ್ಣ ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಬೇಕಿದೆ, ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿ ಕುರುಕ್ಷೇತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ. ಆದರೆ ತಾವು ಪೌರಾಣಿಕ ಕಥೆಯೊಂದನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಲು ನನಗೆ ಆಫರ್ ಬಂದಿತ್ತು, ಈ ಪಾತ್ರ ಮಾಡಿದ್ದರೇ ನನಗೆ ಮತ್ತಷ್ಟು ಒಳ್ಳೆಯ ಹೆಸರು ಬರುತ್ತಿತ್ತು. ಇದೊಂದು ಗೌರವಾನ್ವಿತ ಪಾತ್ರವಾಗಿದೆ. ಆದರೆ ಇಂಥ ಸಮಯದಲ್ಲಿ ನಾನು ಕಮಿಟ್ ಆಗಲು ಸಾಧ್ಯವಿಲ್ಲ. ಈ ವೇಳೆ ನನ್ನ ತೂಕವನ್ನು ಹೆಚ್ಚಿಸಿಕೊಳ್ಳುವುದು ಕಷ್ಟದ ವಿಷಯ ಎಂದು ಹೇಳಿದ್ದಾರೆ.
ಕರ್ಣನ ಪಾತ್ರ ನಿರಾಕರಿಸಲು ಬೇರೆ ಯಾವುದೇ ಕಾರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲಿ ದರ್ಶನ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ನಾನು ಮಾಡುತ್ತೇನೆ. ಮ್ಯಾಗ್ನಮ್ ಒಪಸ್ ನಿರ್ಮಾಣದ ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಅರ್ಜುನ್ ಪಾತ್ರ ಮಾಡುತ್ತಿದ್ದಾರೆ. ಕರ್ಣನ ಪಾತ್ರಕ್ಕಾಗಿ ಚಿತ್ರತಂಡ ಸೂಕ್ತ ನಟನಿಗಾಗಿ ಹುಡುಕಾಟ ನಡೆಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com