ಬೆಂಗಳೂರು: ಮಲೇಷಿಯಾದಲ್ಲಿ ಸುದೀರ್ಘ ಹಂತದ ಚಿತ್ರೀಕರಣ ನಡೆಸಿ 'ತಾರಕ್' ಚಿತ್ರತಂಡ ಹಿಂದಿರುಗಿದ್ದು ಈಗ ಅದೇ ಉಸಿರಿನಲ್ಲಿ ಮುಂದಿನ ವಿದೇಶಿ ಚಿತ್ರೀಕರಣಕ್ಕೆ ಮುಂದಾಗಿದೆ. ನಟ ದರ್ಶನ್, ಶಾನ್ವಿ ಶ್ರೀವಾಸ್ತವ ಮತ್ತು ನಿರ್ದೇಶಕ ಪ್ರಕಾಶ್ ಜಯರಾಮ್ ಸೇರಿದಂತೆ ೩೦ ಜನರ ಚಿತ್ರತಂಡ ಇಂದು ಇಟಲಿಗೆ ತೆರಳಲಿದ್ದು, ಮುಂದಿನ ೧೨ ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ. ಇನ್ನು ಕೆಲವು ದಿನಗಳಲ್ಲಿ ಶ್ರುತಿ ಹರಿಹರನ್ ಕೂಡ ಚಿತ್ರತಂಡ ಸೇರಲಿದ್ದಾರೆ.