ಬಾಹುಬಲಿ-2 ಚಿತ್ರದ ನಿರ್ದೇಶಕ ರಾಜಮೌಳಿ ಸಂಭಾವನೆ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಗರಿಷ್ಠ ಗಳಿಕೆ ಕಂಡ ಚಿತ್ರ ಎಂಬ ದಾಖಲೆ ನಿರ್ಮಾಣದತ್ತ ಮುಖ ಮಾಡಿರುವ ಚಿತ್ರ ಬಾಹುಬಲಿ-2. ಇಂತಹ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಗರಿಷ್ಠ ಗಳಿಕೆ ಕಂಡ ಚಿತ್ರ ಎಂಬ ದಾಖಲೆ ನಿರ್ಮಾಣದತ್ತ ಮುಖ ಮಾಡಿರುವ ಚಿತ್ರ ಬಾಹುಬಲಿ-2. ಇಂತಹ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ  ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ...

ಹೌದು..ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಹಾಲಿವುಡ್ ಮಂದಿ ಕೂಡ ಒಂದು ಕ್ಷಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಬಾಹುಬಲಿ. ಚಿತ್ರ ಬಿಡುಗಡೆಯಾದ ದಿನದಿಂದ ಈ ವರೆಗೂ ಅಂದರೆ ನಾಲ್ಕು ದಿನಗಳ  ಅಂತ್ಯಕ್ಕೆ ಬಾಹುಬಲಿ-2 ಚಿತ್ರ ವಿವಿಧ ಭಾಷೆಗಳಲ್ಲಿ ಸುಮಾರು 650 ಕೋಟಿಗೂ ಅಧಿಕ ಸಂಗ್ರಹ ಮಾಡಿದೆ. ಖ್ಯಾತ ಆರ್ಥಿಕ ವಿಶ್ಲೇಷಕ ರಮೇಶ್‌ ಬಾಲಾ ಅವರು ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿದ್ದು, ಬಾಹುಬಲಿ-2 ಕೇವಲ 4  ದಿನಗಳಲ್ಲಿ .625 ಕೋಟಿ ಗಳಿಸಿದೆ. ಭಾರತದಲ್ಲಿ ರು.490 ಕೋಟಿ, ಸಾಗರೋತ್ತರ ರಾಷ್ಟ್ರಗಳಲ್ಲಿ ರು.135 ಕೋಟಿ ಸೇರಿ ಒಟ್ಟು ರು.625 ಕೋಟಿಯನ್ನು ಬಾಹುಬಲಿ-2 ತನ್ನ ತೆಕ್ಕೆಗೆ ಬಾಚಿಕೊಂಡಿದೆ ಎಂದಿದ್ದಾರೆ.

ಇನ್ನು ಈ ಸೂಪರ್ ಹಿಟ್‌ ಚಿತ್ರದಲ್ಲಿ ನಟಿಸಿದ ನಟ-ನಟಿಯರ ಗಳಿಕೆ ಎಷ್ಟುಎಂಬ ಕುತೂಹಲದ ಮಾಹಿತಿ ಇದೀಗ ಬಹಿರಂಗವಾಗಿದ್ದು, ಸಿನೆಮಾ ಸುದ್ದಿಯ ವೆಬ್ ಸೈಟ್ ವೊಂದರ ವರದಿಯ ಪ್ರಕಾರ, ಚಿತ್ರದ ನಾಯಕ ನಟ, ಬಾಹುಬಲಿ  ಪಾತ್ರಧಾರಿ ಪ್ರಭಾಸ್‌ ಗೆ ಈ ಚಿತ್ರಕ್ಕಾಗಿ ರು.25 ಕೋಟಿ ಸಂಭಾವನೆ ಪಾವತಿಸಲಾಗಿದೆಯಂತೆ. ಅಂತೆಯೇ ಚಿತ್ರದ ವಿಲನ್, ಬಲ್ಲಾಳ ದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಅವರಿಗೆ ರು.15 ಕೋಟಿ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೆ .  2 ಕೋಟಿ, ಶಿವಗಾಮಿ ಪಾತ್ರಕ್ಕಾಗಿ ರಮ್ಯಕೃಷ್ಣಾ ಅವರಿಗೆ ರು. 2.5 ಕೋಟಿ, ದೇವಸೇನಾ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಹಾಗೂ ಆವಂತಿಕಾ ಪಾತ್ರಧಾರಿ ತಮನ್ನಾ ಭಾಟಿಯಾಗೆ ತಲಾ ರು. 5 ಕೋಟಿ ಸಂಭಾವನೆ ಪಾವತಿಸಲಾಗಿದೆ  ಎಂದು ವರದಿ ತಿಳಿಸಿದೆ.

ನಿರ್ದೇಶಕ ರಾಜಮೌಳಿ ಸಂಭಾವನೆ ಎಷ್ಟು ಗೊತ್ತಾ?
ಇನ್ನು ಇಡೀ ಚಿತ್ರದ ಸೂತ್ರಧಾರಿ ಅಂದರೆ ನಿರ್ದೇಶಕ ರಾಜಮೌಳಿ ಅವರಿಗೆ ರು.28 ಕೋಟಿ ಪಾವತಿಸಲಾಗಿದ್ದು, ಇದಲ್ಲದೆ ಚಿತ್ರದ ಲಾಭಾಂಶ ಅಂದರೆ ಚಿತ್ರದ ಗಳಿಕೆಯಲ್ಲಿ ಶೇಕಡಾವಾರು ಲಾಭಾಂಶವನ್ನು ನಿರ್ದೇಶಕರಿಗೆ ನೀಡುವ  ಕುರಿತು ಒಪ್ಪಂದವಾಗಿದೆಯಂತೆ. ಅಂದರೆ 1/3 ಅನುಪಾತದಲ್ಲಿ ಒಪ್ಪಂದವಾಗಿದ್ದು, ಅದರಂತೆ ಚಿತ್ರಗಳಿಸುವ ಲಾಭಾಂಶದ ಹಣದಲ್ಲಿ ನಿರ್ದೇಶಕ ರಾಜಮೌಳಿ ಅವರಿಗೆ 1/3 ಪ್ರಮಾಣದ ಹಣವನ್ನು ನೀಡಲಾಗುತ್ತದೆಯಂತೆ. ಒಂದು  ಅಂದಾಜಿನ ಪ್ರಕಾರ ಈ ಹಣ 100 ಕೋಟಿ ದಾಟುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆ ಮೂಲಕ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ನಿರ್ದೇಶಕ ಎಸ್ ಎಸ್ ರಾಜಮೌಳಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com