ನಾನೂ ಒಂದು ಬ್ರೂಸ್ ಲೀ ಬಯೋಪಿಕ್ ಮಾಡಲಿದ್ದೇನೆ ಎಂದ ಆರ್ ಜಿ ವಿ

ಬ್ರೂಸ್ ಲೀ ಅವರ ಅಧಿಕೃತ ಬಯೋಪಿಕ್ ನ ಸಹ ನಿರ್ಮಾಣದಲ್ಲಿ ಶೇಖರ್ ಕಪೂರ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಖ್ಯಾತ ನಟ ಮತ್ತು ಮಾರ್ಷಿಯಲ್ ಕಲೆಯ ನಿಪುಣ
ರಾಮ್ ಗೋಪಾಲ್ ವರ್ಮಾ-ಬ್ರೂಸ್ ಲೀ-ಶೇಖರ್ ಕಪೂರ್
ರಾಮ್ ಗೋಪಾಲ್ ವರ್ಮಾ-ಬ್ರೂಸ್ ಲೀ-ಶೇಖರ್ ಕಪೂರ್
ಮುಂಬೈ: ಬ್ರೂಸ್ ಲೀ ಅವರ ಅಧಿಕೃತ ಬಯೋಪಿಕ್ ನ ಸಹ ನಿರ್ಮಾಣದಲ್ಲಿ ಶೇಖರ್ ಕಪೂರ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಖ್ಯಾತ ನಟ ಮತ್ತು ಮಾರ್ಷಿಯಲ್ ಕಲೆಯ ನಿಪುಣ ಬ್ರೂಸ್ ಲೀ ಅವರ ಮೇಲಿನ ತೀವ್ರ ಪ್ರೀತಿಯಿಂದ ತಾವು ಕೂಡ ಲೀ ಬಗ್ಗೆ ಸಿನೆಮಾ ನಿರ್ದೇಶಿಸುವುದಾಗಿ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದಾರೆ. 
ಶೇಖರ್ ಕಪೂರ್ ಅವರು ನಿರ್ಮಿಸಲಿರುವ 'ಲಿಟಲ್ ಡ್ರಾಗನ್' ಬಿಡುಗಡೆ ಸಮಯದಲ್ಲಿಯೇ ತಮ್ಮ ಸಿನೆಮಾವನ್ನು ಬಿಡುಗಡೆ ಮಾಡುವುದಾಗಿಯೂ ನಿರ್ದೇಶಕ ಹೇಳಿದ್ದಾರೆ. 
ಇದರ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ವರ್ಮಾ "ಬ್ರೂಸ್ ಲೀ ಅವರ ಮೇಲಿನ ನನ್ನ ಆರಾಧನಾ ಭಾವನೆಗಾಗಿಯೇ ಅವರ ಬಯೋಪಿಕ್ ಅನ್ನು ನಿರ್ದೇಶಿಸಿ, ಶೇಖರ್ ಕಪೂರ್ ಅವರ ಅಧಿಕೃತ ಬಯೋಪಿಕ್ ಸಮಯದಲ್ಲಿಯೇ ಬಿಡುಗಡೆ ಮಾಡಲಿದ್ದೇನೆ" ಎಂದಿದ್ದಾರೆ.
ಶೇಖರ್ ಕಪೂರ್ ಅವರ ಬಗ್ಗೆ ನನ್ನದೇನು ವಿರೋಧ ಇಲ್ಲ ಅವರನ್ನು ಅತಿ ಹೆಚ್ಚು ಗೌರವಿಸುತ್ತೇನೆ ಎಂದು ಕೂಡ ಆರ್ ಜಿ ವಿ ಬರೆದಿದ್ದು "ಶೇಖರ್ ಕಪೂರ್ ಅವರ ಬಗ್ಗೆ ನನ್ನದೇನು ವಿರೋಧ ಇಲ್ಲ ಅವರನ್ನು ಅತಿ ಹೆಚ್ಚು ಗೌರವಿಸುತ್ತೇನೆ, ಆದರೆ ಬ್ರೂಸ್ ಲೀ ಬಗೆಗಿನ ನನ್ನ ತೀವ್ರ ಪ್ರೀತಿಗಾಗಿ ಇದನ್ನು ಮಾಡುತ್ತಿದ್ದೇನೆ" ಎಂದಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರು ಬರೆದಿರುವ "ಸೆಕ್ಸ್ ನಂತರ ನಾನು ಅತಿ ಹೆಚ್ಚು ಪ್ರೀತಿಸುವ ಒಂದೇ ಸಂಗತಿ ಬ್ರೂಸ್ ಲೀ" ಎಂಬ ಲೇಖನವನ್ನು ಕೂಡ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 
ಬ್ರೂಸ್ ಲೀ ಅವರ ಪುತ್ರಿ ಶನಾನ್ ಲೀ, ಪತ್ನಿ ಲಿಂಡಾ ಲೀ ಮತ್ತು ಕಪೂರ್ ಅವರಿಗಿಂತಲೂ ಲೀ ಬಗ್ಗೆ ನನಗೆ ಹೆಚ್ಚು ತಳಿದಿದೆ ಎಂದಿರುವ ಆರ್ ಜಿ ವಿ ಅವರ ಬಯೋಪಿಕ್ ಗೆ ನನ್ನಿಂದ ನ್ಯಾಯ ಸಲ್ಲಿಸಲು ಸಾಧ್ಯ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com