ಸೂಪರ್ ಸ್ಟಾರ್ ರಜನಿ ಜೀಪ್ ಮೇಲೆ ಬಿತ್ತು ಮಹೀಂದ್ರಾ ಕಣ್ಣು
ಸಿನಿಮಾ ಸುದ್ದಿ
ಸೂಪರ್ ಸ್ಟಾರ್ ರಜನಿ ಜೀಪ್ ಮೇಲೆ ಬಿತ್ತು ಮಹೀಂದ್ರಾ ಕಣ್ಣು
ಧನುಷ್ ನಿರ್ಮಾಣದ ಸೂಪರ್ ಸ್ಟಾರ್ ರಜನೀಕಾಂತ್ ಅವರು ಅಭಿನಯಿಸುವ ಹೊಸ ಚಿತ್ರ ಕಾಲ ಕರಿಕಾಲನ್ ಪೋಸ್ಟರ್ ವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಚಿತ್ರದ ಪೋಸ್ಟರ್ ನಲ್ಲಿದ್ದ...
ಮುಂಬೈ; ಧನುಷ್ ನಿರ್ಮಾಣದ ಸೂಪರ್ ಸ್ಟಾರ್ ರಜನೀಕಾಂತ್ ಅವರು ಅಭಿನಯಿಸುವ ಹೊಸ ಚಿತ್ರ ಕಾಲ ಕರಿಕಾಲನ್ ಪೋಸ್ಟರ್ ವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಚಿತ್ರದ ಪೋಸ್ಟರ್ ನಲ್ಲಿದ್ದ ಜೀಪ್'ನ ಮೇಲೆ ಮಹೀಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಅವರ ಕಣ್ಣು ಬಿದ್ದಿದೆ.
ಕಾಲ ಕರಿಕಾಲನ್ ಚಿತ್ರದ ಪೋಸ್ಟರ್ ನಲ್ಲಿ ರಜನಿಕಾಂತ್ ಅವರು ಜೀಪ್ ನ ಮೇಲೆ ಕುಳಿತುಕೊಂಡಿದ್ದಾರೆ. ರಜನಿ ಕುಳಿತುಕೊಂಡಿರುವ ಜೀಪ್ ಮಹೀಂದ್ರಾ ಕಂಪನಿಗೆ ಸೇರಿದ್ದಾಗಿದ್ದು, ಮಹೀಂದ್ರಾ ಕಂಪನಿಯ ಥಾರ್ ಜೀಪ್ ಅನ್ನೇ ಚಿತ್ರಕ್ಕಾಗಿ ವಿಭಿನ್ನ ರೀತಿಯಲ್ಲಿ ಮಾರ್ಪಡಿಸಲಾಗಿದೆ.
ಜೀಪ್ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು, ಚಿತ್ರರಂಗದ ದಂತಕಥೆ ರಜನಿಕಾಂತ್ ಅವರು ಕಾರನ್ನು ಸಿಂಹಾಸನದಂತೆ ಬಳಸಿಕೊಂಡಿದ್ದಾರೆ. ಇದೀಗ ಅದು ಸಿಂಹಾಸನವೇ ಆಗಿ ಹೋಗಿದೆ. ಯಾರಿಗಾದರೂ ಈ ಜೀಪ್ ಎಲ್ಲಿದೆ ಎಂದು ಗೊತ್ತಿದ್ದರೆ ತಿಳಿಸಿ ಅದನ್ನು ನಮ್ಮ ಆಟೋ ಮ್ಯೂಸಿಯಂಗಾಗಿ ಖರೀದಿಸಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಆಟೋ ಚಾಲಕನೊಬ್ಬ ತನ್ನ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ರೀತಿಯಲ್ಲಿ ಬದಲಾಯಿಸಿದ್ದನ್ನು ಮೆಚ್ಚಿಕೊಂಡಿದ್ದ ಆನಂದ್, ಆ ಆಟೋ ಪಡೆದು. ಅದರ ಬದಲಿಗೆ ಮಹೀಂದ್ರಾ ಸುಪ್ರೋ ವಾಹನವನ್ನು ಉಚಿತವಾಗಿ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ