ಕೇವಲ ಎರಡು ಹಾಡುಗಳ ಜೊತೆ ನಾಳೆ ಮುಫ್ತಿ ಆಡಿಯೋ ರಿಲೀಸ್!

ಮುಫ್ತಿ ಚಿತ್ರ ತಂಡ ಇತ್ತೀಚೆಗೆ ಬಿಡುಗಡೆ ಮಾಡಿದ ಟೀಸರ್ ನಲ್ಲಿ ಭಾರೀ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಚಿತ್ರ ತಂಡ ಆನ್ ಲೈನ್ ನಲ್ಲಿ ನಾಳೆ ಆಡಿಯೋ...
ಮುಫ್ತಿ ಸಿನಿಮಾ ಸ್ಟಿಲ್
ಮುಫ್ತಿ ಸಿನಿಮಾ ಸ್ಟಿಲ್
ಬೆಂಗಳೂರು: ಮುಫ್ತಿ ಚಿತ್ರ ತಂಡ ಇತ್ತೀಚೆಗೆ ಬಿಡುಗಡೆ ಮಾಡಿದ ಟೀಸರ್ ನಲ್ಲಿ ಭಾರೀ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಚಿತ್ರ ತಂಡ ಆನ್ ಲೈನ್ ನಲ್ಲಿ ನಾಳೆ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.
ಮುಫ್ತಿ ಸಿನಿಮಾದಲ್ಲಿ ಕೇವಲ ಎರಡು ಹಾಡುಗಳು ಮಾತ್ರ ಇವೆ, ಶ್ರೀ ಮುರುಳಿ ಮತ್ತು ಶಿವರಾಜ್ ಕುಮಾರ್ ಅವರ ಪರಿಚಯ ನೀಡುವ ಎರಡು ಹಾಡುಗಳು ಮಾತ್ರ ಇವೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೇಳಿದ್ದಾರೆ,
ಹಾಡುಗಳು ಸಿನಿಮಾ ಕಥೆಯ ಫ್ಲೋ ಹಾಳು ಮಾಡುತ್ತವೆ ಎಂಬ ಉದ್ದೇಶದಿಂದ ಹೆಚ್ಚಿನ ಹಾಡುಗಳನ್ನು ಅಳವಡಿಸಲು ಚಿತ್ರ ತಂಡ ನಿರ್ಧರಿಸಿದೆ. ಸಂಗೀತ್ ನಿರ್ದೇಶಕ ರವಿ ಬಸ್ರೂರ್ ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ಶಿವರಾಜ್ ಕುಮಾರ್ ಅವರ ಇಂಟ್ರುಡಕ್ಚರಿ ಸಾಂಗ್ ಗೆ ಹಿನ್ನೆಲೆ ಗಾಯನ ನೀಡಿದ್ದಾರೆ.
ನರ್ತನ್ ನಿರ್ದೇಶನದ ಮುಫ್ತಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಶ್ರೀಮುರುಳಿ ನಟಿಸಿದ್ದು, ಶಾನ್ವಿ ಶ್ರೀವಾತ್ಸವ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com