ಬೆಂಗಳೂರು: ತೆಲುಗಿನ ನಟ ಅಲ್ಲು ಸಿರಿಶ್ ಅಭಿನಯದ ಒಕ್ಕ ಕ್ಷಣಂ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದ್ದು ಈ ಮಧ್ಯೆ ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.
ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ಅಲ್ಲು ಸಿರಿಶ್ ಜತೆ ಸಮಯ ಕಳೆದರು. ಈ ಬಗ್ಗೆ ಶಿರಿಶ್ ಟ್ವೀಟ್ ಮಾಡಿದ್ದು ಕನ್ನಡದ ಸ್ಟಾರ್ ನಟನೊಬ್ಬರು ತಮ್ಮ ಶೂಟಿಂಗೆ ಸೆಟ್ ಬಂದು ಕೆಲ ಹೊತ್ತು ನಮ್ಮ ಜತೆ ಸಮಯ ಕಳೆದಿದ್ದು ಸಂತಸ ತಂದಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಟ್ರೈಲರ್ ಲಾಂಚ್ ಗೆ ಅಲ್ಲು ಸಿರಿಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲದೆ ಹಾಡೊಂದಕ್ಕೆ ಎರಡು ಸ್ಟೆಪ್ ಸಹ ಹಾಕಿದ್ದರು.