ಸ್ಯಾಂಡಲ್ವುಡ್ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಸೆಟ್ಟೇರುತ್ತಿದೆ. ನವೆಂಬರ್ 23ರಂದು ಸ್ಟಾರ್ ನಟರಾದ ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳಿಗೆ ಮುಹೂರ್ತ ನೆರವೇರಲಿದೆ.
ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರೆಬಲ್ ಸ್ಟಾರ್ ಅಂಬರೀಶ್ ಇದೀಗ ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರ ಕವಚ ಚಿತ್ರ ಒಂದೇ ದಿನ ಮೂಹೂರ್ತ ನೆರವೇರಿಸಿಕೊಳ್ಳಲಿವೆ.
ಅಂಬಿ ನಿಂಗೆ ವಯಸ್ಸಾಯ್ತು ಚಿತ್ರ ತಮಿಳಿನ ಪವರ್ ಪಾಂಡಿ ಚಿತ್ರದ ರಿಮೇಕ್ ಚಿತ್ರವಾಗಿದ್ದು ಚಿತ್ರವನ್ನು ಗುರುದತ್ತಾ ಗಾಣಿಗಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಸುದೀಪ್ ರ ಕಿಚ್ಚಾ ಕ್ರಿಯೆಷನ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದ್ದು ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡುತ್ತಿದ್ದಾರೆ.
ಮಲಯಾಳಂನ ಸೂಪರ್ ಹಿಟ್ ಚಿತ್ರ ಒಪ್ಪಂ ಚಿತ್ರದ ಕನ್ನಡದ ರಿಮೇಕ್ ಕವಚ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಜಿವಿಆರ್ ವಾಸು ನಿರ್ದೇಶಿಸುತ್ತಿದ್ದು ಸಂಪತ್ ಕುಮಾರ್ ಮತ್ತು ಎಂವಿವಿ ಸತ್ಯನಾರಾಯಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.