ಜಲ್ಸಾ ಸಿನಿಮಾ ನಿರ್ದೇಶಕ ಕಂತ ಕನ್ನಾಲಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ಕಾಪೋರೇಟ್ ವಲಯದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಕೊಂಡಿರುವ ಐಟಿ ಉದ್ಯೊಗಿಯ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರು ಕಥೆ ಹೇಳಿದಾಗ, ಅದನ್ನು ಕೇಳಿ ತುಂಬ ಇಷ್ಟಪಟ್ಟು ಈ ಸಿನಿಮಾ ಮಾಡುವುದಕ್ಕೆ ಅವರು ಒಪ್ಪಿಕೊಂಡಿದ್ದಾರಂತೆ. ‘ಇಂದಿನ ಅಧುನಿಕ ಬದುಕಿಗೆ ಒಗ್ಗಿ ಹೋಗಿರುವಂತಹ ಹುಡುಗಿಯಾಗಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ನವೆಂಬರ್ ಮೊದಲ ವಾರದಲ್ಲಿ ತಾವು ಚಿತ್ರೀರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.