ಕಿಸ್ ಚಿತ್ರದ ಯುವ ನಟಿ ಶ್ರೀಲೀಲಾಗೆ ಡಾಕ್ಟರ್ ಅಗುವ ಗುರಿ

ನಿರ್ದೇಶಕ ಎಪಿ ಅರ್ಜುನ್ ಅವರ ಮುಂದಿನ ಚಿತ್ರ ಕಿಸ್ ಮೂಲಕ 16 ವರ್ಷದ ಶ್ರೀಲೀಲಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶ್ರೀಲೀಲಾಗೆ ನಾಯಕನಾಗಿ ವಿರಾಟ್ ಅಭಿನಯಿಸುತ್ತಿದ್ದು, ಚಿತ್ರೀಕರಣ...
ಕಿಸ್
ಕಿಸ್
Updated on
ನಿರ್ದೇಶಕ ಎಪಿ ಅರ್ಜುನ್ ಅವರ ಮುಂದಿನ ಚಿತ್ರ ಕಿಸ್ ಮೂಲಕ 16 ವರ್ಷದ ಶ್ರೀಲೀಲಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶ್ರೀಲೀಲಾಗೆ ನಾಯಕನಾಗಿ ವಿರಾಟ್ ಅಭಿನಯಿಸುತ್ತಿದ್ದು, ಚಿತ್ರೀಕರಣ ಪ್ರಾರಂಭವಾಗಿದೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಶ್ರೀಲೀಲಾ ಸಂದರ್ಶನ ನೀಡಿದ್ದು, ಡಾಕ್ಟರ್ ಆಗುವ ಗುರಿ ಹೊಂದಿದ್ದು, ಈಗಲೂ ಅದಕ್ಕಾಗಿ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಚಿತ್ರರಂಗವನ್ನು ನಾನಾಗಿಯೇ ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ಚಿತ್ರರಂಗದಲ್ಲಿಯೂ ಉತ್ತಮವಾಗಿ ಮಾಡಬಲ್ಲೆ ಎಂದು ಹಲವರು ಪ್ರೋತ್ಸಾಹ ನೀಡಿದ್ದು ನಾನು ಕಿಸ್ ಚಿತ್ರದಲ್ಲಿ ನಟಿಸಲು ಕಾರಣ ಎಂದು ಹೇಳಿದ್ದಾರೆ. 
8ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಯುತ್ತಿರುವ ಶ್ರೀಲೀಲಾ, ನನ್ನನ್ನು ವೇದಿಕೆ ಮೇಲೆ ನೋಡಿದ ಜನರು "ಪಕ್ಕಾ ಹಿರೋಇನ್ ಮೆಟೀರಿಯಲ್" ಎನ್ನುತ್ತಿದ್ದರು, ಆದರೆ ನನಗೆ ಡಾಕ್ಟರ್ ಆಗುವ ಗುರಿಯನ್ನು ಹೊರತುಪಡಿಸಿ ಬೇರೇನೂ ಯೋಜನೆ ಇರಲಿಲ್ಲ. ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನಗೆ ಅನಿರೀಕ್ಷಿತ ಎಂದು ಹೇಳಿದ್ದಾರೆ. 
ಮಾತಿನ ಭಾಗವನ್ನು ಪೂರ್ಣಗೊಳಿಸಿದ ನಂತರ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಲಿದೆ. ಚಿತ್ರೀಕರಣದ ವೇಳೆ ಸಹ ಕಲಾವಿದರು ತಂಡ ನೀಡುವ ಪ್ರೋತ್ಸಾಹದಿಂದ ಪ್ರತಿ ಹಂತದಲ್ಲೂ ಉತ್ತಮ ನಟನೆ ನೀಡಲು ಸಾಧ್ಯವಾಗುತ್ತಿದೆ. ಸೆಟ್ ನಲ್ಲಿ ತಮಗೆ ಯಾವುದೇ ಸಮಸ್ಯೆ ಇಲ್ಲದಂತೆ ಎಚ್ಚರ ವಹಿಸುತ್ತಿರುವ ಚಿತ್ರ ತಂಡಕ್ಕೆ ಶ್ರೀಲೀಲಾ ಧನ್ಯವಾದ ತಿಳಿಸಿದ್ದಾರೆ. 
ಇಷ್ಟು ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡುವುದು ಸೂಕ್ತವಲ್ಲ ಎಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಲವರು ಸಲಹೆ ನೀಡಿದ್ದಾರೆ, ಆದರೆ ನಾನು ಚಿತ್ರರಂಗ ಹಾಗೂ ಶಿಕ್ಷಣ ಎರಡನ್ನೂ ಒಟ್ಟಿಗೆ ನಿಭಾಯಿಸಬಲ್ಲೆ ಎಂಬ ವಿಶ್ವಾಸವಿತ್ತು. ನನ್ನ ಬಗ್ಗೆ ತಾಯಿಗೆ ವಿಶ್ವಾಸವಿದ್ದು ಚಿತ್ರರಂಗದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಿದ್ದಾರೆ, ಡಾಕ್ಟರ್ ಆಗುವ ಭರವಸೆಯನ್ನು ನಾನು ಈಡೇರಿಸುತ್ತೇನೆ ಎಂದು ಶ್ರೀಲೀಲಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com