ದಿ ವಿಲ್ಲನ್: ಸುದೀಪ್ ಇಂಟ್ರೊಡಕ್ಟರಿ ಸಾಂಗ್ ಗೆ ಖರ್ಚು ಮಾಡಿದ ಹಣವೆಷ್ಟು ಗೊತ್ತೆ?

ದಕ್ಷಿಣ ಭಾರತದ ಅತ್ಯಂತ ದುಬಾರಿ ವೆಚ್ಚದ ಸಿನಿಮಾ ಎಂದೇ ಬಿಂಬಿತವಾಗಿರುವ ದಿ ವಿಲ್ಲನ್ ಚಿತ್ರದಲ್ಲಿ ಸುದೀಪ್ ಅವರನ್ನು ಪರಿಚಯಿಸುವ ...
ದಿ. ವಿಲ್ಲನ್ ಚಿತ್ರದ ಪೋಸ್ಟರ್
ದಿ. ವಿಲ್ಲನ್ ಚಿತ್ರದ ಪೋಸ್ಟರ್
ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ದುಬಾರಿ ವೆಚ್ಚದ ಸಿನಿಮಾ ಎಂದೇ ಬಿಂಬಿತವಾಗಿರುವ ದಿ ವಿಲ್ಲನ್ ಚಿತ್ರದಲ್ಲಿ ಸುದೀಪ್ ಅವರನ್ನು ಪರಿಚಯಿಸುವ ಹಾಡಿಗಾಗಿ ಬರೋಬ್ಬರೀ ಎರಡು ಕೋಟಿ ರು ಖರ್ಚು ಮಾಡಲಾಗಿದೆ. 
ಅರ್ಜುನ್ ಜನ್ಯ ಸಂಗೀತ ಹಾಗೂ ನಾಗೇಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರೇಮ್ ಹಿನ್ನೆಲೆ ಗಾಯನ ನೀಡಿರುವ ಈ ಹಾಡಿಗೆ ಸುಮಾರು 100 ಮಂದಿ ವಿದೇಶಿ ಡ್ಯಾನ್ಸರ್ ಗಳು ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ.
ಪ್ರಮುಖ ಥೀಮ್ ಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಮಾಹಿತಿಗಳನ್ನು ಚಿತ್ರತಂಡ ಕಲೆ ಹಾಕುತ್ತಿದೆ.  ಇದರ ಜೊತೆಗೆ ನಟ ಶಿವರಾಜ್ ಕುಮಾರ ಅವರನ್ನು ಪರಿಚಯಿಸುವ ಹಾಡು ಕೂಡ ಇದೆ.  ಇದಕ್ಕಾಗಿ ಬೆಂಗಳೂರಿನಲ್ಲಿ ಸೆಟ್ ಹಾಕಲಾಗುವುದು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ವಿ ಮನೋಹರ್ ನಿರ್ಮಾಣದ ಈ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಹಾಕಿರುವ ಬಹು ದೊಡ್ಡ ಸಿನಿಮಾಸೆಟ್ ನಲ್ಲಿ ಶಿವರಾಜ್ ಕುಮಾರ್ ಅವರ ಚೇಸಿಂಗ್ ಸನ್ನಿವೇಶ ಚಿತ್ರೀಕರಿಸಲಾಗುತ್ತಿದೆ. ಶಿವರಾಜ್ ಕುಮಾರ್ ಜೊತೆಗೆ, ಫ್ರಾನ್ಸ್, ಮುಂಬಯಿ, ಚೆನ್ನೈನಿಂದ ಹೆಚ್ಚುವರಿ ಕಲಾವಿದರನ್ನು ಕರೆದು ತರಲಾಗಿದೆ ಎಂದು ಹೇಳಿದ್ದಾರೆ,
ವೈಟ್ ಫೀಲ್ಡ್ ನಲ್ಲಿರುವ ಟೆಕ್ ಪಾರ್ಕ್ ನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ರವಿ ವರ್ಮ ಸಾಹಸ ನಿರ್ದೇಶನವಿದೆ. ಶಿವರಾಜ್ ಕುಮಾರ್ ಅವರ ಉತ್ಸಾಹ ನಮಗೆ ಮತ್ತಷ್ಟು ಸ್ಪೂರ್ತಿಯಾಗಿದೆ, ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವ ಸ್ಟಂಟ್ಸ್ ಮ್ಯಾನ್ ಗಳಿಂದ ಪ್ರೇರಣೆಗೊಂಡಿರುವ  ಶಿವರಾಜ್ ಕುಮಾರ್ ಚಲಿಸುತ್ತಿದ್ದ ಕಾರಿನಿಂದ ನೆಗೆದಿದ್ದಾರೆ. 
ಸುದೀಪ್ ಮತ್ತು ಶಿವಣ್ಣ ಇಬ್ಬರು ಪ್ರಮುಖ ಚಿತ್ರಕ್ಕಾಗಿ ಪ್ರಮುಖ ವಾತ್ರವಹಿಸಿದ್ದಾರೆ,  ಇವರಿಬ್ಬರ ಜೊತೆ ಶೂಟಿಂಗ್ ಮಾಡುವುದು ನನ್ನ ಅದೃಷ್ಟವಾಗಿದೆ ಎಂದು ಪ್ರೇಮ್ ಹೇಳಿದ್ದಾರೆ.
ಅಕ್ಟೊಬರ್ 30 ರೊಳಗೆ ಶಿವಣ್ಣ ಅಭಿನಯದ ಸನ್ನಿವೇಶಗಳನ್ನು ಪೂರ್ಣಗೊಳಿಸಲಾಗುವುದು ನಂತರ ಶಿವಣ್ಣ ಹೈದರಾಬಾದ್ ಗೆ ತೆರಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com