'ಕವಲು ದಾರಿ'ಯಲ್ಲಿ ಅನಂತ್ ನಾಗ್ ಪಾತ್ರವೇ ಹೈಲೈಟ್

ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು ಸಿನಿಮಾ ನಂತರ ನಿರ್ದೇಶಕ ಹೇಮಂತ್ ರಾವ್ ಮತ್ತು ನಟ ಅನಂತ್ ನಾಗ್ ಮತ್ತೆ ಕವಲು ದಾರಿ ಮೂಲಕ ...
ಅನಂತ್ ನಾಗ್
ಅನಂತ್ ನಾಗ್
ಬೆಂಗಳೂರು: ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು ಸಿನಿಮಾ ನಂತರ ನಿರ್ದೇಶಕ ಹೇಮಂತ್ ರಾವ್ ಮತ್ತು ನಟ ಅನಂತ್ ನಾಗ್ ಮತ್ತೆ ಕವಲು ದಾರಿ ಮೂಲಕ ಒಂದಾಗಿದ್ದಾರೆ. 
ಕವಲುದಾರಿ ಫರ್ಸ್ಟ್ ಲುಕ್ ಬಿಡುಗಡೆಯಾಗಿದ್ದು ಅನಂತ್ ನಾಗ್ ಅವರ ಪಾತ್ರವೇ ಸಿನಿಮಾದ ಹೈಲೈಟ್ ಆಗಿದೆ, ಸಿನಿಮಾದಲ್ಲಿ ಅನಂತ್  ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫಾರ್ಮ್ ಹೌಸ್ ಮನೆಯೊಂದರಲ್ಲಿ  ನಿಂತು ಬಿಳಿ ಜುಬ್ಬಾ, ಬಿಳಿ ಪೈಜಾಮಾ ತೊಟ್ಟಿರುವ ಅನಂತ್ ನಾಗ್  ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ನವೆಂಬರ್  ಮೊದಲ ವಾರದಿಂದ ಮತ್ತೆ 25 ದಿನಗಳ ಕಾಲ ಚಿತ್ರೀಕರಣಕ್ಕಾಗಿ ಚಿತ್ರ ತಂಡ ವಾಪಸ್ ಮೈಸೂರಿಗೆ ತೆರಳಲಿದೆ.  ಉಳಿದ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ.
ನಟ ಪುನೀತ್ ರಾಜ್ ಕುಮಾರ್  ಅವರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು,  ಅನಂತ್ ನಾಗ್ ಜೊತೆ, ರಿಷಿ. ಅಚ್ಯುತ ಕುಮಾರ್  ಸಿದ್ದಾರ್ಥ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com