ನಿರ್ದೇಶಕ ಪ್ರದೀಪ್ ಬಳಿ ಉತ್ತಮ ಕಥೆಯಿದೆ, ಆದರೆ ನಿರ್ಮಾಪಕರು ಸಿಕ್ಕಿಲ್ಲ: ಮನೋರಂಜನ್

: ತಮ್ಮ ಎರಡನೇ ಬೃಹಸ್ಪತಿ ಸಿನಿಮಾ ಪೂರ್ಣಗೊಳಿಸುತ್ತಿರುವ ನಟ ಮನೋರಂಜನ್ ಮೂರನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ...
ಮನೋರಂಜನ್
ಮನೋರಂಜನ್
Updated on: 
ಬೆಂಗಳೂರು: ತಮ್ಮ ಎರಡನೇ ಬೃಹಸ್ಪತಿ ಸಿನಿಮಾ ಪೂರ್ಣಗೊಳಿಸುತ್ತಿರುವ ನಟ ಮನೋರಂಜನ್ ಮೂರನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಊರ್ವಿ ಸಿನಿಮಾ ನಿರ್ದೇಶಕ ಪ್ರದೀಪ್ ವರ್ಮಾ ಜೊತೆ ಮೂರನೇ ಸಿನಿಮಾ ಮಾಡಲು ಮನೋರಂಜನ್ ನಿರ್ದರಿಸಿದ್ದಾರೆ ಎಂದು ಹೇಳಲಾಗಿದೆ. 
ಇನ್ನೂ ಈ ಸಂಬಂಧ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಮನೋರಂಜನ್, ಪ್ರದೀಪ್ ಉತ್ತಮ ಕಥೆಯೊಂದಿಗೆ ಬಂದಿದ್ದಾರೆ, ಆದರೆ ಅದು ಶೀಘ್ರವೇ ಸೆಟ್ಟೇರಲು ಸಾಧ್ಯವಿಲ್ಲ, ಏಕೆಂದರೆ ಸಿನಿಮಾಗೆ 15 ಕೋಟಿ ರು ಬಂಡವಾಳ ಬೇಕು,  ಹೀಗಾಗಿ ಅವರು ನಿರ್ಮಾಪಕರಿಗಾಗಿ ಹುಡುಕಾಟ ನಡೆಸಲಾಗಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ತಂದೆ ಇನ್ನೂ ಕಥೆ ಕೇಳಿಲ್ಲ,  ಅದೆಲ್ಲಾ ಮುಗಿದ ನಂತರ ಈ ಪ್ರಾಜೆಕ್ಟ್ ಗೆ ಸಹಿ ಮಾಡಲು ಸಮಯವಕಾಶ ಕೇಳಿದ್ದೇನೆ ಎಂದು ಹೇಳಿದ್ದಾರೆ.
ನಂದ ಕಿಶೋರ್ ನಿರ್ದೇಶನದ ಬಹಸ್ಪತಿ ಸಿನಿಮಾ ಮೊದಲು ಸಂಪೂರ್ಣವಾಗಿ ಮುಗಿಯಬೇಕೆಂದು ನಾನು ಬಯಸುತ್ತೇನೆ,  ಅದಾದ ನಂತರ ನನ್ನ ಮುಂದಿನ ಪ್ರಾಜೆಕ್ಟ್ ಗೆ ಸಹಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com