ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ದಿಲೀಪ್ ಬೆಂಬಲಕ್ಕೆ ನಿಂತ ನಟ ಶ್ರೀನಿವಾಸನ್

ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದಿಲೀಪ್ ಬೆಂಬಲಕ್ಕೆ ಮಲಯಾಳಂ ನಟ ಶ್ರೀನಿವಾಸನ್...
ಮಲಯಾಳಂ ನಟ ಶ್ರೀನಿವಾಸನ್
ಮಲಯಾಳಂ ನಟ ಶ್ರೀನಿವಾಸನ್
Updated on: 
ತಿರುವನಂತಪುರಂ: ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದಿಲೀಪ್ ಬೆಂಬಲಕ್ಕೆ ಮಲಯಾಳಂ ನಟ ಶ್ರೀನಿವಾಸನ್ ಅವರು ಬಂದಿದ್ದಾರೆ. 
ಪ್ರಕರಣ ಸಂಬಂಧ ಸುದ್ದಿಗಾರರಗೊಂದಿಗೆ ಮಾತನಾಡಿರುವ ಅವರು, ದಿಲೀಪ್ ಅವರು ಅಪರಾಧ ಮಾಡಿದ್ದಾರೆಂಬುದನ್ನು ಆಲೋಚಿಸುವುದಕ್ಕೂ ಸಾಧ್ಯವಿಲ್ಲ. ದಿಲೀಪ್ ಮುಗ್ಧ ವ್ಯಕ್ತಿ ಎಂಬುದನ್ನು ಸಮಯವೇ ಸಾಬೀತುಪಡಿಸಲಿದೆ ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ ಹಾಗೂ ಶಾಸಕ ಕೆ.ಬಿ ಗಣೇಶ್ ಕುಮಾರ್ ಅವರು ದಿಲೀಪ್ ಪರವಾಗಿ ಹೇಳಿಕೆಯೊಂದನ್ನು ನೀಡಿದ್ದರು. ಗಣೇಶ್ ಅವರ ಹೇಳಿಕೆ ಸಂಬಂಧ ಪೊಲೀಸರು ನ್ಯಾಯಾಲಯದ ಮೆಟ್ಟಿಲೇರಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com