ಮಹಿಳೆಯರನ್ನು ಯಾವಾಗಲೂ 2ನೇ ದರ್ಜೆ ನಾಗರೀಕರೆಂದೇ ಪರಿಗಣಿಸಲಾಗುತ್ತಿದೆ: ಪ್ರಿಯಾಂಕ ಚೋಪ್ರಾ

ಮಹಿಳೆಯರನ್ನು ಯಾವಾಗರೂ 2ನೇ ದರ್ಜೆಯ ನಾಗರೀಕರೆಂದೇ ಪರಿಗಣಿಸಲಾಗುತ್ತದೆ, ಹೆಣ್ಣು ಮಕ್ಕಳನ್ನು ಮೌಲ್ಯವಿದ್ದಂತೆ ನೋಡುವವರ ಮನಸ್ಥಿತಿಗಳು ಬದಲಾಗಬೇಕಿದೆ ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ನಿಧಿ (ಯುನಿಸೆಫ್) ರಾಯಭಾರಿ...
ನಟಿ ಪ್ರಿಯಾಂಕಾ
ನಟಿ ಪ್ರಿಯಾಂಕಾ
ನವದೆಹಲಿ: ಮಹಿಳೆಯರನ್ನು ಯಾವಾಗರೂ 2ನೇ ದರ್ಜೆಯ ನಾಗರೀಕರೆಂದೇ ಪರಿಗಣಿಸಲಾಗುತ್ತದೆ, ಹೆಣ್ಣು ಮಕ್ಕಳನ್ನು ಮೌಲ್ಯವಿದ್ದಂತೆ ನೋಡುವವರ ಮನಸ್ಥಿತಿಗಳು ಬದಲಾಗಬೇಕಿದೆ ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ನಿಧಿ (ಯುನಿಸೆಫ್) ರಾಯಭಾರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ನಾವು ಪಿತೃಪ್ರಭುತ್ವ ಸಮಾಜದಲ್ಲಿ ಜೀವನ ನಡೆಸುತ್ತಿದ್ದೇವೆ. ಇದು ಕೇವಲ ಭಾರತದಲ್ಲಿ ಮಾತ್ರವೇ ಅಲ್ಲ, ವಿಶ್ವದಲ್ಲಿಯೂ ಕೂಡ. ಮಹಿಳೆಯರನ್ನು ಯಾವಾಗಲೂ 2ನೇ ದರ್ಜೆಯ ನಾಗರೀಕರಂತೆಯೇ ನೋಡಲಾಗುತ್ತಿದೆ. ನಮ್ಮ ಅವಕಾಶಗಳಿಗಾಗಿ ನಾವು ಹೋರಾಟ ಮಾಡಲಾಗುತ್ತಿದೆ. ಆದರೆ, ಇದೀಗ ಮಹಿಳೆಯರೂ ಕೂಡ ಯಾವುದೇ ಸಾಧನೆಯನ್ನಾದರೂ ಮಾಡಬಲ್ಲರು. ಇದು ಅತ್ಯಂತ ದೊಡ್ಡ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ. 
10 ವರ್ಷಗಳಲ್ಲಿ ಇಡೀ ವಿಶ್ವವೇ ಬದಲಾಗುತ್ತದೆ ಎಂದಲ್ಲ. ನನ್ನ ಜೀವನದ ಅವಧಿಯಲ್ಲಿ ಇದನ್ನು ನೋಡಲು ಬಯಸುತ್ತೇನೆ. ಈಗ ಸಾಧ್ಯವಾಗದೇ ಹೋದರು ಮುಂದಿನ ಪೀಳಿಗೆಯಲ್ಲಾದರೂ ಆಗಲಿದೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ. ಇಂದು ನಾವು ಒಬ್ಬಂಟಿಯಲ್ಲ. ಸಾಮಾಜಿಕ ಜಾಲತಾಣಗಳೆಂಬ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲದರಲ್ಲೂ ಕೆಟ್ಟದ್ದು ಹಾಗೂ ಒಳ್ಳೆಯದು ಎಂಬುದಿರುತ್ತದೆ ಎಂದು ತಿಳಿಸಿದ್ದಾರೆ. 
ಮದುವೆಯಾಗುವುದು, ಮಕ್ಕಳನ್ನು ಹೆರುವುದು ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಇದೇ ಸಂದರ್ಭದಲ್ಲಿ ಕೆಲಸಕ್ಕೆ ಹೋಗುವ ಶಕ್ತಿ ಮಹಿಳೆಯರಿಗಿದೆ. ಹೊರಗೆ ಹೋಗಿ ತನ್ನ ಗುರಿ ತಲುಪಲು ಮಹಿಳೆಯರಿಗೆ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಮಹಿಳೆಯರು ಜೀವನದಲ್ಲಿ ನೆಲೆಯೂರಬಹುದು, ಹಾಗೆಯೇ ಪುರಷರೂ ಕೂಡ ನೆಲೆಯೂರಬಹುದು, ಮಕ್ಕಳನ್ನು ಹೆರಬಹುದು. ಆದರೆ, ಇದೇ ಜೀವನದ ಅಂತ್ಯವಲ್ಲ. ಇದು ಆರಂಭವಾಗಿರುತ್ತದೆ. ಹೆಣ್ಣುಮಕ್ಕಳನ್ನು ಗೌರವಯುತವಾಗಿ ನೋಡಬೇಕು. ನನಗೆ ಸಾಕಷ್ಟು ಕನಸುಗಳಿವೆ. ಮಕ್ಕಳು ಹಸಿವಿನಿಂದ ಮಲಗುವುದು ನನಗೆ ಇಷ್ಟವಿಲ್ಲ. ಆದರೆ, ಹೆಣ್ಣು ಮಕ್ಕಳನ್ನು ಸರಕುಗಳಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಅಷ್ಟೇ ನೋಡಬಾರದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com