ದ ವಿಲನ್ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಚಿತ್ರದ ಮೂರನೇ ಹಾಡು ನಾಡಿದ್ದು 4 ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಮತ್ತು ಆಮಿ ಜಾಕ್ಸನ್ ನೃತ್ಯಕ್ಕೆ ನಿರ್ದೇಶಕ ಪ್ರೇಮ್ ಅವರೇ ಹಾಡಿದ್ದಾರೆ.
ಲವ್ವಾಗೋಯ್ತು ನಿನ್ಮೇಲೆ ಎಂಬ ಸುದೀಪ್ ಮತ್ತು ಆಮಿ ನೃತ್ಯದ ಹಾಡಿಗೆ ನಿರ್ದೇಶಕ ಪ್ರೇಮ್ ದನಿ ನೀಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ನಾನು ಬರೆದೆ. ಕಲಿಯುಗ, ದ್ವಾಪರಯುಗ ಮತ್ತು ರಾಮಯುಗ ಎಂಬಿತ್ಯಾದಿಗಳು ಅದರಲ್ಲಿ ಬರುತ್ತದೆ. ಇದನ್ನು ಆರಂಭದಲ್ಲಿ ದಲೆರ್ ಮೆಹಂದಿ ಮತ್ತು ಕೈಲಾಶ್ ಖೇರ್ ಹಾಡಿದರು.
ನಂತರ ನಾನು ಹಾಡುವುದನ್ನು ನೋಡಿದ ಸುದೀಪ್ ನಾನು ಹಾಡಿದರೆ ಉತ್ತಮವಾಗಿರುತ್ತದೆ. ಸ್ಥಳೀಯ ಭಾಷೆಯ ಸೊಗಡು ಹಾಡಿನಲ್ಲಿ ಬರುತ್ತದೆ ಎಂದರು.ಅರ್ಜುನ್ ಜನ್ಯ ಅವರು ಕೂಡ ಕೇಳಿಕೊಂಡರು. ಅವರನ್ನು ಬೇಸರಪಡಿಸಬಾರದು ಎಂದು ಹಾಡಿದೆ ಎಂದರು.
Advertisement