ಕನ್ನಡ ಚಿತ್ರ ನಿರ್ಮಾಪಕ, ವಿತರಕ ಎಂ.ಭಕ್ತವತ್ಸಲ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ. ಭಕ್ತವತ್ಸಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎಂ.ಭಕ್ತವತ್ಸಲ
ಎಂ.ಭಕ್ತವತ್ಸಲ
Updated on

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ. ಭಕ್ತವತ್ಸಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಂ.ಎಸ್.ಸತ್ಯು ನಿರ್ದೇಶನದಲ್ಲಿ ‘ಕನ್ನೇಶ್ವರ ರಾಮ’ ಚಿತ್ರ ನಿರ್ಮಿಸಿದ ಭಕ್ತವತ್ಸಲ ಅವರು ಅನೇಕ ಭಾಷೆಯ ಚಿತ್ರಗಳ ನಿರ್ಮಾಣ ಮತ್ತು ಕನ್ನಡ ಚಲನಚಿತ್ರಗಳ ವಿತರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಭಾರತ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಏಕೈಕ ಕನ್ನಡಿಗ ಎನ್ನವ ಹೆಗ್ಗಳಿಕೆ ಅಷ್ಟೇ ಅಲ್ಲದೆ, ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿ ಸತತ 7 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಮೆ ಇವರದ್ದು. ದಕ್ಷಿಣ ಭಾರತದ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

‘ಪಟ್ಟಾಭಿರಾಮ ರೆಡ್ಡಿ’ ನಿರ್ದೇಶಿಸಿದ್ದ ‘ಚಂಡಮಾರುತ’ ಚಿತ್ರದಲ್ಲಿ ತೆರೆಮೇಲೂ ಕಾಣಿಸಿಕೊಂಡಿದ್ದರು.

 ಸಿನಿಮಾ ಜಗತ್ತಿನ ಬೆಳವಣಿಗೆ ಮತ್ತು ಕನ್ನಡ ಚಿತ್ರರಂಗ ಉದ್ಯಮದ ಬಗ್ಗೆ ಅನೇಕ ಲೇಖನಗಳ ಜತೆ ಪುಸ್ತಕವನ್ನೂ ಬರೆದಿದ್ದಾರೆ. ಇವರಿಗೆ ರಾಜ್ಯ ಸರಕಾರ 2002 ರಲ್ಲಿ ಬಾ.ರಾಜ್ ಕುಮಾರ್ ಪ್ರಶಸ್ತಿನೀಡಿ ಗೌರವಿಸಿದೆ.

ಎಂ. ಭಕ್ತವತ್ಸಲ ಅವರ ನಿಧನದಿಂದಾಗಿ ಸಿನಿ ರಂಗಕ್ಕೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com