ತಲೆಗೂದಲು, ಉಗುರುಗಳಿಗೆ ಪಾಪ್ ಗಾಯಕಿ ಕಾರ್ಡಿ ಬಿ ಮಾಡುವ ವೆಚ್ಟ ಎಷ್ಟು ಗೊತ್ತಾ?

ಅಮೆರಿಕಾದ ಪಾಪ್ ಗಾಯಕಿ ಹಾಗೂ ಟಿವಿ ನಿರೂಪಕಿ ಕಾರ್ಡಿ ಬಿ ತನ್ನ ಸೌಂದರ್ಯಕ್ಕಾಗಿ ಮಾಡುವ ವೆಚ್ಚ ಕೇಳಿದ್ದರೆ ತಲೆ ತಿರುಗೋದು ನಿಶ್ಚಿತ.
ಕಾರ್ಡಿ ಬಿ
ಕಾರ್ಡಿ ಬಿ

ವಾಷಿಂಗ್ಟನ್:  ಅಮೆರಿಕಾದ ಪಾಪ್  ಗಾಯಕಿ ಹಾಗೂ ಟಿವಿ ನಿರೂಪಕಿ ಕಾರ್ಡಿ ಬಿ ತನ್ನ ಸೌಂದರ್ಯಕ್ಕಾಗಿ ಮಾಡುವ ವೆಚ್ಚ ಕೇಳಿದ್ದರೆ ತಲೆ ತಿರುಗೋದು  ನಿಶ್ಚಿತ.

ತನ್ನ ತಲೆಗೂದಲು ಹಾಗೂ ಬೆರಳಿಗಾಗಿಯೇ  ನೂರಾರು ಡಾಲರ್ ವೆಚ್ಟ ಮಾಡುವ ಕಾರ್ಡಿ, ತನ್ನ ಸೌಂದರ್ಯಕ್ಕಾಗಿಯೇ ಸಾವಿರಾರು ರೂಪಾಯಿ ವೆಚ್ಟ ಮಾಡುವುದಾಗಿ ತಿಳಿಸಿದ್ದಾರೆ.

ತನ್ನ ಸೌಂದರ್ಭ ಕಾಪಾಡಿಕೊಳ್ಳುವುದಕ್ಕಾಗಿ ಹೇಗೆಲ್ಲಾ ಹಣ ವೆಚ್ಚ ಮಾಡುವುದಾಗಿ ಇನ್ಸ್ ಟಾಗ್ರಾಮ್ ನಲ್ಲಿ ಆಕೆ ಹೇಳಿಕೆಕೊಂಡಿದ್ದಾಳೆ.

ಈಗಿನ ಕಾಲಕ್ಕೆ ತಕ್ಕಂತೆ  ತಲೆಕೂದಲು, ಉಗುರುಗಳು ಹಾಗೂ ಕಣ್ಣಿನ ಅಂದಕ್ಕಾಗಿ ನೂರಾರು ಡಾಲರ್ ವೆಚ್ಚ ಮಾಡುವುದಾಗಿ ಆಕೆ ಹೇಳಿದ್ದಾಳೆ.

ತಲೆಗೂದಲು ಮತ್ತು  ಉಗುರಿಗಾಗಿ 200 ಡಾಲರ್  ವೆಚ್ಚ ಮಾಡಬೇಕಾಗುತ್ತದೆ. ವಿಗ್ ಗಾಗಿ 500, ಅಥವಾ 800 ಡಾಲರ್  ನೀಡಬೇಕಾಗುತ್ತದೆ ಎಂದು ಹೇಳಿರುವ ಕಾರ್ಡಿ ಬಿ ಕೊನೆಯಲ್ಲಿ ಇವುಗಳಿಂದ ಏನು ಉತ್ತಮ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಇಷ್ಟೇಲ್ಲಾ ಹಣ ಕೊಟ್ಟರು ಗುಣಮಟ್ಟದ ಸೌಂದರ್ಭ ಕಾಪಾಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com