ಬೆಂಗಳೂರು: ಎಸ್. ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಶೂಟಿಂಗ್ ಮತ್ತೆ 2019 ರಿಂದ ಆರಂಭವಾಗಲಿದೆ. ಜನವರಿ 2 ರಿಂದ ಆರಂಭವಾಗುವ ಶೂಟಿಂಗ್ 25 ದಿನಗಳ ಕಾಲ ನಡೆಯಲಿದ್ದು, ಅಂತಿಮ ಹಂತದ ಚಿತ್ರೀಕರಣವಾಗಲಿದೆ.
ಜನವರಿ ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆ, ಆರ್ಆರ್ಆರ್ ಮೋಷನ್ ಪಿಕ್ಟರ್ಸ್ ನಿರ್ಮಾಣದ ಸಿನಿಮಾದಲ್ಲಿ ಸುದೀಪ್ ಬಾಕ್ಸರ್ ಪಾತ್ರ ನಿರ್ವಹಿಸಿದ್ದಾರೆ.
ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸುನೀಲ್ ಶೆಟ್ಟಿ ಆಕಾಂಕ್ಷಾ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟಿಸಿದ್ದಾರೆ.
ಪೈಲ್ವಾನ್ ಸಿನಿಮಾ 8 ಭಾಷೆಗಳಲ್ಲಿ ರಿಲೀಸ್ ಆಗಲಿದೆ, ಆಯಾಯಾ ಭಾಗಗಳಲ್ಲಿ ಅಗತ್ಯವಿರುವ ಹಂಚಿಕೆದಾಕರರೇ ಸಿನಿಮಾ ಹಂಚಿಕೆಹೊಣೆ ವಹಿಸಿಕೊಳ್ಳಲಿದ್ದಾರೆ, ಬೇಸಿಗೆ ರಜೆಗೆ ಸಿನಿಮಾ ರಿಲೀಸ್ ಆಗಲಿದೆ.