ಬೇಸಿಗೆಯಲ್ಲಿ ಕೆಜಿಎಫ್- ಚಾಪ್ಟರ್ 2 ಚಿತ್ರೀಕರಣ ಆರಂಭ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -1 ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿರುವಂತೆ ನಿರ್ದೇಶಕ ಪ್ರಶಾಂತ್ ನಿಲ್ ಕೆಜಿಎಫ್ ಮುಂದುವರೆದ ಭಾಗದ ಚಿತ್ರೀಕರಣಕ್ಕೆ ಚಿಂತನೆ ನಡೆಸುತ್ತಿದ್ದಾರೆ.
ಯಶ್
ಯಶ್
Updated on

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -1 ಬಾಕ್ಸ್ ಆಫೀಸ್ ನಲ್ಲಿ  ಚಿಂದಿ ಉಡಾಯಿಸುತ್ತಿರುವಂತೆ ನಿರ್ದೇಶಕ ಪ್ರಶಾಂತ್  ನಿಲ್  ಕೆಜಿಎಫ್  ಮುಂದುವರೆದ ಭಾಗದ ಚಿತ್ರೀಕರಣಕ್ಕೆ ಚಿಂತನೆ ನಡೆಸುತ್ತಿದ್ದಾರೆ.  ಕೆಜಿಎಫ್ ಚಿತ್ರ  ದಿನದಿಂದ ದಿನದ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದು, ಈ ವಾರ 150 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಹೊಂಬಾಳೆ ಫಿಲ್ಮಿಂ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರ ಪ್ಯಾನ್ ಇಂಡಿಯಾ   ಸಿನಿಮಾವಾಗಿ  ದೇಶಾದ್ಯಂತ ಬಿಡುಗಡೆಗೊಂಡಿದ್ದು,  ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅಂತೆಯೇ  ಯಶ್  ಭಾರತೀಯ ನಟರಾಗಿ ರೂಪುಗೊಂಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ಮೂರನೇ ದಿನಕ್ಕೆ 50 ಕೋಟಿ ಮಾಡಿದ್ದ ಕೆಜಿಎಫ್  ಒಂದು ವಾರದಲ್ಲಿ 100 ಕೋಟಿ ಕ್ಲಬ್ ಸೇರಿತ್ತು.

ಆದರೆ, ಈ ಉತ್ಸಾಹದಲ್ಲಿಯೇ ನಿರ್ಮಾಪಕರು ಸುಮ್ಮನೆ ಕುಳಿತಿಲ್ಲ. ಚಾಪ್ಟರ್ 2 ಚಿತ್ರೀಕರಣಕ್ಕೆ ಚಿಂತನೆ ನಡೆಸುತ್ತಿದ್ದಾರೆ.  ಕೆಜಿಎಫ್ ಚಾಪ್ಟರ್ -2 ಶೇ, 15 ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಉಳಿದ ಭಾಗವನ್ನು ಬೇಸಿಗೆಯಲ್ಲಿ ಚಿತ್ರೀಕರಿಸಲಾಗುತ್ತದೆ. ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಈ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.

ಕೆಜಿಎಫ್ ಚಾಪ್ಟರ್ 2 ನಲ್ಲೂ ಇದೇ ತಾರಾಗಣ ಹಾಗೂ ತಂತ್ರಜ್ಞರು ಇರಲಿದ್ದಾರೆ.  ಸಂಗೀತ ನಿರ್ದೇಶಕ ರವಿ ಬಸ್ರೂರು,  ಛಾಯಾಗ್ರಾಹಕ ಭುವನ್ ಗೌಡ , ಕಲಾ ನಿರ್ದೇಶಕ ಶಿವಕುಮಾರ್  ಅವರೇ ಇರಲಿದ್ದು, ಹೊಸದಾಗಿ ಕೆಲವರನ್ನು ಪರಿಚಯಿಸಲಾಗುತ್ತಿದೆ.

ತೆಲುಗು, ತಮಿಳು ಭಾಷೆಯಲ್ಲೂ ಕೆಜಿಎಫ್ ಉತ್ತಮ ಕಲೆಕ್ಷನ್ ಮಾಡುತ್ತಿರುವಂತೆ  ಮಲೇಷ್ಯಾ, ದುಬೈ,  ಶ್ರೀಲಂಕಾ, ಸಿಂಗಾಪುರ, ಮತ್ತು ಆಸ್ಟ್ರೇಲಿಯಾದಲ್ಲೂ ಸಿನಿಮಾ ಬಿಡುಗಡೆ ಮಾಡಲು  ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಚೀನಾ ಭಾಷೆಯಲ್ಲೂ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com