ಪಾಕ್ ಕಲಾವಿದರಿಗೆ 2 ವರ್ಷ ನಿಷೇಧ ಹೇರಲು ಬಾಲಿವುಡ್ ನಿರ್ಮಾಪಕ ಮಂಡಳಿ ಮನವಿ

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ತನ್ನ ಉದ್ಧಟತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದಿ ಚಿತ್ರರಂಗದಲ್ಲಿ ಪಾಕಿಸ್ತಾನ ಕಲಾವಿದರಿಗೆ ಮಣೆ ಹಾಕುವುದನ್ನು ಬಿಟ್ಟು ಮೊದಲು ಭಾರತೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಾಲಿವುಡ್ ನಲ್ಲಿ ದಟ್ಟವಾಗತೊಡಗಿದೆ...
ಇಂಡಿಯನ್ ಫಿಲ್ಟ್ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ ಕೌನ್ಸಿಲ್
ಇಂಡಿಯನ್ ಫಿಲ್ಟ್ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ ಕೌನ್ಸಿಲ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ತನ್ನ ಉದ್ಧಟತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದಿ ಚಿತ್ರರಂಗದಲ್ಲಿ ಪಾಕಿಸ್ತಾನ ಕಲಾವಿದರಿಗೆ ಮಣೆ ಹಾಕುವುದನ್ನು ಬಿಟ್ಟು ಮೊದಲು ಭಾರತೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಾಲಿವುಡ್ ನಲ್ಲಿ ದಟ್ಟವಾಗತೊಡಗಿದೆ. 
ಚಿತ್ರವೊಂದರಲ್ಲಿ ಗಾಯಕ ಅರಿಜಿತ್ ಸಿಂಗ್'ರನ್ನು ತಿರಸ್ಕರಿಸಿ ಪಾಕ್ ಗಾಯಕ ರೆಹಮಾನ್ ಫತೆ ಅಲಿ ಖಾನ್ ಅವರಿಗೆ ಅವಕಾಶ ನೀಡಲಾಗಿದೆ ಎಂಬು ಸುದ್ದಿ ಹರಿದಾಡುತ್ತಿದ್ದಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು, ಪಾಕಿಸ್ತಾನ ಕಲಾವಿದರಿಗೆ ಬಾಲಿವುಡ್ ನಿಷೇಧ ಹೇರಬೇಕೆಂದು ಹೇಳಿದ್ದರು. 
ಇದಕ್ಕೆ ಇದೀಗ ಬಾಲಿವುಡ್ ನಿರ್ಮಾಪಕರ ಸಂಘ ಕೂಡ ಇದಕ್ಕೆ ಧ್ವನಿಗೂಡಿಸಿದೆ. ಇಂಡಿಯನ್ ಫಿಲ್ಟ್ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ ಸಿಇಓ ಸುರೇಶ್ ಅಮಿನ್ ಅವರು ಪ್ರತಿಕ್ರಿಯೆನೀಡಿ, ಹಿಂದಿ ಸಿನಿಮಾದಲ್ಲಿ ಪಾಕ್ ಕಲಾವಿದರು ಕಾರ್ಯನಿರ್ವಹಿಸುವುದಕ್ಕೆ 2 ವರ್ಷ ನಿಷೇಧ ಹೇರಬೇಕು. ಈ ಬಗ್ಗೆ ಮಂಡಳಿ ಅಧಿಸೂಚನೆ ಹೊರಡಿಸಲಿದೆ. ಮೊದಲು ಭಾರತೀಯರಿಗೆ ಮಾತ್ರ ಅವಕಾಶ ಎಂಬುದನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com