ಕೋಟಿಗೊಬ್ಬ 3 ಕ್ರಿಸ್ ಮಸ್ ಗೆ ಬಿಡುಗಡೆ

ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಮುಹೂರ್ತ ಮಾರ್ಚ್ 2ರಂದು ಎಂದು ಈ...
ಕೋಟಿಗೊಬ್ಬ 2ನಲ್ಲಿ ಸುದೀಪ್
ಕೋಟಿಗೊಬ್ಬ 2ನಲ್ಲಿ ಸುದೀಪ್
Updated on

ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಮುಹೂರ್ತ ಮಾರ್ಚ್ 2ರಂದು ಎಂದು ಈ ಹಿಂದೆ ಸೂರಪ್ಪ ಬಾಬು ಘೋಷಿಸಿದ್ದರು. ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಅವರು ನಿರ್ಧರಿಸಿದ್ದಾರೆ. ಈ ವರ್ಷಾಂತ್ಯಕ್ಕೆ ಕ್ರಿಸ್ ಮಸ್ ದಿನದಂದು ಕೋಟಿಗೊಬ್ಬ 3 ಬಿಡುಗಡೆಯಾಗಲಿದೆ. ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದಲ್ಲಿ ಬಹುತಾರಾಗಣವಿದ್ದು ಈಗಾಗಲೇ ಸಿದ್ಧತೆ ಕಾರ್ಯ ನಡೆಯುತ್ತಿದೆ.

ಈ ಮಧ್ಯೆ, ನಿರ್ಮಾಪಕರು ಚಿತ್ರದ ಮುಹೂರ್ತ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಆನಂದ್ ಆಡಿಯೊ ಚಿತ್ರದ ಆಡಿಯೊ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ. ಈ ವಿಷಯವನ್ನು ಮ್ಯೂಸಿಕ್ ಕಂಪೆನಿಯೇ ಟ್ವೀಟ್ ನಲ್ಲಿ ದೃಢಪಡಿಸಿದೆ. ಇದಕ್ಕೆ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದಲ್ಲಿ ಇನ್ನಿತರ ಕಲಾವಿದರು ಯಾರ್ಯಾರು ಇರುತ್ತಾರೆ ಎಂಬ ಕುತೂಹಲ ಇದೀಗ ಅಭಿಮಾನಿಗಳನ್ನು ಕಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com