ಕುರುಕ್ಷೇತ್ರದಂತಾ ಅದ್ಭುತ ಪೌರಾಣಿಕ ಚಿತ್ರದಲ್ಲಿ ನಾನು ಅಭಿನಯಿಸುತ್ತಿರುವುದಕ್ಕೆ ಸಂತೋಷವಾಗಿದೆ. ಇನ್ನು ಚಿತ್ರರಂಗ ಹಲವು ಹಿರಿಯ ನಟರೊಂದಿಗೆ ನಟಿಸುತ್ತಿರುವುದು ನನ್ನ ಜೀವನದ ಅವಿಸ್ಮರಣೀಯ ಘಟನೆ. ಚಿತ್ರದಲ್ಲಿ ಹಿರಿಯ ನಟರಾದ ಶ್ರೀನಾಥ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ ಮತ್ತು ರವಿಶಂಕರ್ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಬರೀ ದುರ್ಯೋಧನನ ಚಿತ್ರವಲ್ಲ. ಎಲ್ಲಾ ಪಾತ್ರಗಳಿಗೂ ತನ್ನದೇ ಆದ ಮಹತ್ವವಿದೆ. ಇನ್ನು ಕುರುಕ್ಷೇತ್ರದಂತಾ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಿಸುವುದು ನಿರ್ಮಾಪಕರಿಗೆ ಒಂದು ಕಪ್ ಚಹಾದಂತಲ್ಲ. ಆದರೆ ನಿರ್ಮಾಪಕರ ಮುನಿರತ್ನ ಅವರಿಗೆ ಧೈರ್ಯ ಜಾಸ್ತಿ. ಇನ್ನು ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ನಟನು ಸಹ ತಮ್ಮ ಪಾತ್ರವನ್ನು ಸವಾಲಿನಂತೆ ಸ್ವೀಕರಿಸಿದ್ದಾರೆ ಎಂದರು.