ಹೊಸ ವರ್ಷಕ್ಕೆ ತೆರೆಗೆ ಬರುತ್ತಿರುವ ಮೊದಲ ಚಿತ್ರ ಬೃಹಸ್ಪತಿ

2018ರ ಹೊಸ ವರ್ಷದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ನಿರ್ದೇಶಕ ನಂದ ಕಿಶೋರ್ ...
ಬೃಹಸ್ಪತಿ ಚಿತ್ರದ ದೃಶ್ಯ
ಬೃಹಸ್ಪತಿ ಚಿತ್ರದ ದೃಶ್ಯ
Updated on: 
2018ರ ಹೊಸ ವರ್ಷದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ನಿರ್ದೇಶಕ ನಂದ ಕಿಶೋರ್ ಅವರ ಬೃಹಸ್ಪತಿ ಚಿತ್ರ ಬಿಡುಗಡೆ ಕಾಣುತ್ತಿರುವ ಮೊದಲ ಚಿತ್ರವಾಗಿದೆ.
ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡು ಬಂದಿರುವ ನಂದ ಕಿಶೋರ್ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಬೃಹಸ್ಪತಿಯಾಗಿರುವುದರಿಂದ ಜನರ ನಿರೀಕ್ಷೆ ಅಧಿಕವಾಗಿದೆ ಎನ್ನುತ್ತಾರೆ ನಂದ ಕಿಶೋರ್.
ತಮಿಳಿನ ವಿಐಪಿ ಚಿತ್ರದಿಂದ ಸ್ಪೂರ್ತಿ ಪಡೆದುಕೊಂಡು ಬೃಹಸ್ಪತಿ ನಿರ್ಮಿಸಲಾಗಿದೆಯಂತೆ. ಧನುಷ್ ನಾಯಕ ನಟನಾಗಿ ನಟಿಸಿದ ಚಿತ್ರ ಹಿಟ್ ಆಗಿತ್ತು. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಮನರಂಜನೆ, ಕೌಟುಂಬಿಕ, ಭಾವನಾತ್ಮಕ ಪ್ರಧಾನವಾದ ಚಿತ್ರ ಬೃಹಸ್ಪತಿಯಾಗಿದೆ ಎನ್ನುತ್ತಾರೆ ನಿರ್ದೇಶಕರು.
ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಯಾರಾದ ಚಿತ್ರ ಇದಾಗಿದ್ದು ಆ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆಯಂತೆ. ''ನನ್ನ ತಂದೆ ಸುಧೀರ್ ರವಿಚಂದ್ರನ್ ಅವರ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ರವಿ ಸರ್ ತುಂಬಾ ಅವಕಾಶ ನೀಡಿದ್ದಾರೆ. ಅದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ. ಅವರ ಮಗನಿಗೆ ನಿರ್ದೇಶನ ಮಾಡಿರುವುದು ನನಗೆ ಖುಷಿಯಿದೆ ಎನ್ನುತ್ತಾರೆ.
ಬಾಲಿವುಡ್ ನಟಿ ಮಿಶ್ತಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಕನ್ನಿಕಾ, ಸಾಯಿಕುಮಾರ್, ಸಿತಾರ, ತಾರಕ್ ಪೊನ್ನಪ್ಪ,ಅವಿನಾಶ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಅಭಿನಯಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಸತ್ಯ ಹೆಗ್ಡೆ ಅವರ ಕ್ಯಾಮರಾ ಕೈಚಳಕ ಬೃಹಸ್ಪತಿಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com